ಜಿಲ್ಲೆ

ಬಂಗ್ರಕೂಳೂರಿನ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ

ಮಂಗಳೂರು: ಬಂಗ್ರಕೂಳೂರಿನ ೆರ್ತ್‌ಮೈಲ್ ಬಳಿ ಗುರುವಾರ ಸಂಜೆ ವೇಳೆ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಕಾರೊಂದು ಢಿಕ್ಕಿಯಾಗಿದ್ದು, ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದ್ದು, ಏರ್‌ಬ್ಯಾಗ್ ತೆರೆದು ಕೊಂಡ ಕಾರಣ ಯಾವುದೇ ಅಪಾಯ ಉಂಟಾಗಿಲ್ಲ. ಕಾರಿನಲ್ಲಿದ್ದವರು ಹರಿಯಾಣ ಮೂಲದವರಾಗಿದ್ದು, ಕೊಟ್ಟಾರ ಪರಿಸರದಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ.