ಜಿಲ್ಲೆ

ಬಾಲ ಮಂದಿರದಲ್ಲಿದ್ದ ಬಾಲಕ ನಾಪತ್ತೆ

ಹರೀಶ ಎಂ.

ಮಂಗಳೂರು: ಅಪರಾಧ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಾಲ ಮಂದಿರದಲ್ಲಿದ್ದ 14 ವರ್ಷದ ಬಾಲಕನೋರ್ವ ಶಾಲೆಗೆಂದು ಹೋದವನು ನಾಪತ್ತೆಯಾಗಿದ್ದಾನೆ.


ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಟ್ಲ ಪೊಲೀಸರು ಬಾಲಕನನ್ನು ಜೂ.28ರಂದು ಬೋಂದೆಲ್‌ನಲ್ಲಿರುವ ಬಾಲಮಂದಿರಕ್ಕೆ ಒಪ್ಪಿಸಿದ್ದರು. ಬಾಲಮಂದಿರದ ಗೃಹಪಾಲಕರು ಈತನ ವಿದ್ಯಾಭ್ಯಾಸ ಮೊಟಕು ಆಗಬಾರದೆಂಬ ಉದ್ದೇಶದಿಂದ 10ನೇ ತರಗತಿಗೆ ಸೇರ್ಪಡೆ ಮಾಡಿದ್ದರು. ಜು.22ರಂದು ಬಾಲಕನನ್ನು ಗೃಹಪಾಲಕರು ಬಾಲಮಂದಿರದಿಂದ ಶಾಲೆಗೆ ಕಳುಹಿಸಿದ್ದರು. ಬಳಿಕ ಮುಖ್ಯ ಶಿಕ್ಷಕರಿಗೆ ಕರೆ ಮಾಡಿ ವಿಚಾರಿಸಿದಾಗ ಬಾಲಕ ಶಾಲೆಗೆ ಹೋಗದೆ ನಾಪತ್ತೆಯಾಗಿರುವುದು ಗೊತ್ತಾಗಿದೆ. ಈ ಬಗ್ಗೆ ಗೃಹಪಾಲಕರು ಕಾವೂರು ಪೊಲೀಸರಿಗೆ ದೂರು ನೀಡಿದ್ದಾರೆ.