ಮಂಗಳೂರು: ಮೇರಿಹಿಲ್‌ನ ಜೋಗರ್ಸ್ ಪಾರ್ಕ್ ಸದಸ್ಯರ ವತಿಯಿಂದ ಅಶೋಕನಗರ ಸರ್ಕಾರಿ ಹಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ಗುರುವಾರ ಲಾಠಿ ಯೋಗ ತರಬೇತಿ ನೀಡಲಾಯಿತು.
ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಜಂಟಿ ಆಯುಕ್ತ ನಾಗೇಶ್ ರಾವ್ ಕಲ್ಯಾಣಪುರ ಅವರ ನೇತೃತ್ವದಲ್ಲಿ ಮಂಜು ಹಾಸನ್, ರಾಜೇಶ್ ಕಾಮತ್, ವಿಧ್ಯಾಧರ್, ರೋಶನಿ, ದೀಪಕ್ ಅವರು ವಿದ್ಯಾರ್ಥಿಗಳಿಗೆ ಲಾಠಿ ಯೋಗ ತರಬೇತಿ ನೀಡಿದರು. ಈ ಸಂದರ್ಭ ದಿನಕರ ರಾವ್, ಉಷಾ ರಾವ್ ಉಪಸ್ಥಿತರಿದ್ದರು.
ಪ್ರತಿ ದಿನ ಲಾಠಿ ಯೋಗ ಮಾಡುವುದರಿಂದ ಬೊಜ್ಜು ಕಡಿಮೆ ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಸಾಧ್ಯ. ಹೆಬ್ಬರಳಿನಿಂದ ನೆತ್ತಿಯ ತನಕ ವ್ಯಾಯಾಮ ಇದರಲ್ಲಿ ಸಿಗುತ್ತದೆ. ಸುಮಾರು 25ಕ್ಕಿಂತಲೂ ಅಧಿಕ ವ್ಯಾಯಾಮ ಲಾಠಿ ಯೋಗದಲ್ಲಿದೆ ಎಂದು ನಾಗೇಶ್ ರಾವ್ ಮಾಹಿತಿ ನೀಡಿದರು.