ಮಂಗಳೂರು: ಕಾನೂನು ಬಾಹಿರವಾಗಿ ಮದ್ಯ ದಾಸ್ತಾನು ಇಟ್ಟ ಆರೋಪಕ್ಕೆ ಸಂಬಂಧಿಸಿ ಕೋಡಿಕಲ್ ನಿವಾಸಿ ರಿತೇಶ್ ಅವರನ್ನು ಆರನೇ ಜೆ.ಎಮ್.ಎಫ್.ಸಿ. ನ್ಯಾಯಾಲಯ ಖುಲಾಸೆಗೊಳಿಸಿದೆ.
ಕರೋನಾ ಕಾಲದಲ್ಲಿ ಕೋಡಿಕಲ್ ಬಳಿ ದ್ವಿಚಕ್ರ ವಾಹನದಲ್ಲಿ ಸಣ್ಣ ಪ್ಯಾಕೆಟ್‌ಗಳಲ್ಲಿ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಆರೋಪಿ ಮದ್ಯ ಸಾಗಿಸುತ್ತಿದ್ದ ಎಂದು ಆರೋಪಿಸಿ ಅಬಕಾರಿ ಪೋಲೀಸ್ ಇಲಾಖೆಯ ಅಧಿಕಾರಿಗಳು ಕೇಸು ದಾಖಲಿಸಿದ್ದರು. ಮದ್ಯದ ಪ್ಯಾಕೆಟ್‌ಗಳನ್ನು ದ್ವಿಚಕ್ರ ವಾಹನವೊಂದರಿಂದ ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆರೋಪಿ ಸ್ಥಳದಲ್ಲಿ ಇರದೇ ಇದ್ದು ನಿರೀಕ್ಷಣಾ ಜಾಮೀನು ಪಡೆದು ನಂತರ ನ್ಯಾಯಾಲಯಕ್ಕೆ ಹಾಜರಾಗಿದ್ದನು. ಸಾಕ್ಷಿ ಹೇಳಿಕೆಗಳನ್ನು ಗಮನಿಸಿ, ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಲಯ ಆರೋಪಿ ನಿರಪರಾಧಿ ಎಂದು ಬಿಡುಗಡೆಗೊಳಿಸಿದೆ. ಆರೋಪಿಯ ಪರವಾಗಿ ವಕೀಲ ಶಶಿರಾಜ್ ರಾವ್ ಕಾವೂರು ವಾದಿಸಿದ್ದರು.