ಜಿಲ್ಲೆ

ಬಸ್‌ನಲ್ಲಿ ಲ್ಯಾಪ್‌ಟಾಪ್ ಸಹಿತ ಬ್ಯಾಗ್ ಕಳವು

ಹರೀಶ ಎಂ.

ಮಂಗಳೂರು: ಖಾಸಗಿ ಬಸ್‌ನಲ್ಲಿ ಪ್ರಯಾಣಿಕರೋರ್ವರ ಲ್ಯಾಪ್‌ಟಾಪ್ ಸಹಿತ ಬ್ಯಾಗ್ ಕಳವು ಮಾಡಲಾಗಿದೆ.


ಜೂ.10ರಂದು ಬೆಳಗ್ಗೆ ಮೂಲ್ಕಿಯಿಂದ ಮಂಗಳೂರಿಗೆ ಬರುತ್ತಿದ್ದ ಪ್ರಯಾಣಿಕರೋರ್ವರು ಬಸ್‌ನಲ್ಲಿ ಸೀಟ್ ಸಿಗದೇ ಇದ್ದುದರಿಂದ ನಿಂತುಕೊಂಡೇ ಮಂಗಳೂರಿನ ಬಂಟ್ಸ್‌ಹಾಸ್ಟೆಲ್ ಕಡೆಗೆ ಪ್ರಯಾಣಿಸುತ್ತಿದ್ದರು. ಅವರ ಬಳಿ ಇದ್ದ ಲ್ಯಾಪ್‌ಟ್ಯಾಪ್‌ನ್ನು ಲಗೇಜ್ ರ‌್ಯಾಕ್‌ನಲ್ಲಿಟ್ಟಿದ್ದರು. ಬಸ್ ಮಂಗಳೂರು ನಾರಾಯಣಗುರು ವೃತ್ತ ತಲುಪಿದಾಗ ಸೀಟ್ ಸಿಕ್ಕಿದ್ದರಿಂದ ಕುಳಿತುಕೊಂಡು ಪ್ರಯಾಣಿಸಿದ್ದರು. ಬಂಟ್ಸ್ ಹಾಸ್ಟೆಲ್‌ನಲ್ಲಿ ಇಳಿಯುವ ವೇಳೆ ಬ್ಯಾಗ್ ತೆಗೆದುಕೊಳ್ಳಲು ಹೋದಾಗ ಬ್ಯಾಗ್ ಇರಲಿಲ್ಲ. ಬ್ಯಾಗ್‌ನಲ್ಲಿ ಕಚೇರಿಗೆ ಸಂಬಂಧಿಸಿದ ಡೆಲ್ ಕಂಪೆನಿಯ ಅಂದಾಜು 55,000 ರೂ. ಮೌಲ್ಯದ ಲ್ಯಾಪ್‌ಟಾಪ್, ಚಾರ್ಜರ್, ಐಡಿ ಕಾರ್ಡ್ ಇತ್ತು.


ಬಸ್‌ನಲ್ಲಿದ್ದ ಸಿಸಿ ಕೆಮರಾದ ದೃಶ್ಯಗಳನ್ನು ಪರಿಶೀಲಿಸಿದಾಗ ಬೆಳಗ್ಗೆ 9.39ರ ವೇಳೆಗೆ ಯಾರೋ ಅಪರಿಚಿತ ವ್ಯಕ್ತಿ ಬ್ಯಾಗ್‌ನ್ನು ಕಳವು ಮಾಡಿ ಲಾಲ್‌ಬಾಗ್ ಸಿಗ್ನಲ್ ಬಳಿ ಬಸ್ ನಿಧಾನವಾಗಿ ಚಲಿಸುತ್ತಿದ್ದಾಗ ಇಳಿದು ಹೋಗಿರುವ ದೃಶ್ಯ ಸೆರೆಯಾಗಿದೆ. ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.