ಮಂಗಳೂರು ಎಕ್ಕೂರು ಬಜಾಲ್ ಸೆಕೆಂಡ್ ಕ್ರಾಸ್ ರೋಡ್‌ನಲ್ಲಿ ನೂತನ ‘ಎಜೆ ಗ್ರಾೃಂಡ್ ಇಲೈಟ್ ಹೊಟೇಲ್’ ಅನ್ನು ಶುಕ್ರವಾರ ಎ.ಜೆ. ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎ.ಜೆ.ಶೆಟ್ಟಿ ಅವರು ಉದ್ಘಾಟಿಸಿದರು. ನಿರ್ದೇಶಕರಾದ ಶಾರದಾ ಜೆ.ಶೆಟ್ಟಿ, ಪ್ರಶಾಂತ್ ಶೆಟ್ಟಿ, ಆಶ್ರಿತಾ ಪಿ.ಶೆಟ್ಟಿ, ಡಾ.ಪ್ರಶಾಂತ್ ಮಾರ್ಲ, ಡಾ.ಅಮಿತಾ ಪಿ.ಮಾರ್ಲ, ರಂಗ ಬಿ.ಶೆಟ್ಟಿ, ವಿನುತ ಆರ್.ಶೆಟ್ಟಿ ಉಪಸ್ಥಿತರಿದ್ದರು. ಶ್ರೀದೇವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಸಹಿತ ಹಲವು ಗಣ್ಯರು ಭಾಗವಹಿಸಿದರು.
ವಿಜಯವಾಣಿ ಸುದ್ದಿಜಾಲ ಮಂಗಳೂರು
ಗ್ರಾಹಕರಿಗೆ ಐಷಾರಾಮಿ ಹಾಗೂ ಆರಾಮದಾಯಕ ಅನುಭವ ಒದಗಿಸುವ ಎ.ಜೆ. ಸಮೂಹ ಸಂಸ್ಥೆಯ ಹೊಟೇಲ್‌ಗಳ ಪಟ್ಟಿಗೆ ನಗರದ ಎಕ್ಕೂರು ಬಜಾಲ್ ಸೆಕೆಂಡ್ ಕ್ರಾಸ್ ರೋಡ್‌ನಲ್ಲಿ ಶುಕ್ರವಾರ ಶುಭಾರಂಭಗೊಂಡ ‘ಎಜೆ ಗ್ರ್ಯಾಂಡ್ ಇಲೈಟ್ ಹೊಟೇಲ್’ ಹೊಸ ಸೇರ್ಪಡೆ.
ಎ.ಜೆ. ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎ.ಜೆ.ಶೆಟ್ಟಿ ಉದ್ಘಾಟಿಸಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಕರಾವಳಿ ಭಾಗದಲ್ಲಿ ಮನೆಮಾತಾಗಿರುವ ಮೋತಿಮಹಲ್ ಹೊಟೇಲ್ ಮೂಲಕ ಎ.ಜೆ.ಸಮೂಹ ಸಂಸ್ಥೆಯು ಹೊಟೇಲ್ ಉದ್ಯಮ ಆರಂಭಿಸಿತು. ನಂತರ ಕರಂಗಲ್ಪಾಡಿಯಲ್ಲಿ ಆರಂಭಿಸಿದ ಎ.ಜೆ.ಗ್ರ್ಯಾಂಡ್ ಹೊಟೇಲ್ ಕೂಡ ಅಲ್ಪಾವಧಿಯಲ್ಲೇ ಗ್ರಾಹಕರ ಪ್ರೀತಿ- ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ. ಉದ್ಯಮದಲ್ಲಿ ದೀರ್ಘ ಕಾಲದ ಅನುಭವದ ಮೇಲೆ ಎಕ್ಕೂರಿನಲ್ಲಿ ಆರಂಭಿಸುತ್ತಿರುವ ‘ಎಜೆ ಗ್ರ್ಯಾಂಡ್ ಇಲೈಟ್ ಹೊಟೇಲ್’ ಅನ್ನು ಕೂಡ ಗ್ರಾಹಕರು ಪ್ರೀತಿಯಿಂದ ಸ್ವಾಗತಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
- ಸುಸಜ್ಜಿತ, ಆಧುನಿಕ ವ್ಯವಸ್ಥೆ
ಹೊಸ ಹೊಟೇಲ್ ನಲ್ಲಿ ಸಸ್ಯಾಹಾರಿ ಹಾಗೂ ಮಾಂಸಾಹಾರಿ ಪ್ರತ್ಯೇಕ ವಿಭಾಗಗಳು, ಸುಂದರವಾದ ಈಜುಕೊಳ, ಮೂರು ಬಾಂಕ್ವೇಟ್ ಹಾಲ್, 1000 ಮಂದಿ ಆಸೀನರಾಗಲು ಅವಕಾಶವಿರುವ ಓಪನ್ ಥಿಯೇಟರ್, 35 ಡಿಲಕ್ಸ್ ರೂಂಗಳು, ಒಳಗೊಂಡಿದೆ. ನೈಟ್ ಕ್ಲಬ್, ಹೆಲ್ತ್ ಕ್ಲಬ್, ಕಾನ್ಫರೆನ್ಸ್ ರೂಂ ವ್ಯವಸ್ಥೆ ಇದೆ ಎಂದು ಅವರು ಹೇಳಿದರು.
ನಿರ್ದೇಶಕರಾದ ಶಾರದಾ ಜೆ.ಶೆಟ್ಟಿ, ಪ್ರಶಾಂತ್ ಶೆಟ್ಟಿ, ಆಶ್ರಿತಾ ಪಿ.ಶೆಟ್ಟಿ, ಡಾ.ಪ್ರಶಾಂತ್ ಮಾರ್ಲ, ಡಾ.ಅಮಿತಾ ಪಿ.ಮಾರ್ಲ, ರಂಗ ಬಿ.ಶೆಟ್ಟಿ, ವಿನುತ ಆರ್.ಶೆಟ್ಟಿ ಉಪಸ್ಥಿತರಿದ್ದರು. ಶ್ರೀದೇವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಸಹಿತ ಹಲವು ಗಣ್ಯರು ಭಾಗವಹಿಸಿದರು.
- *****
- ಹೊಸ ಉದ್ಯಮ ಆರಂಭವಾಗುವ ಜತೆ ಉದ್ಯೋಗ ಅವಕಾಶಗಳು ಹೆಚ್ಚುತ್ತವೆ. ವಿವಿಧ ವ್ಯಾಪಾರ ಕ್ಷೇತ್ರಗಳಲ್ಲಿ ವಹಿವಾಟು ಹೆಚ್ಚುತ್ತದೆ. ಎ.ಜೆ. ಸಮೂಹ ಸಂಸ್ಥೆಯ ಹೊಟೇಲ್ ಉದ್ಯಮ, ವೈದ್ಯಕೀಯ ಕಾಲೇಜು ಸಹಿತ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಒಟ್ಟು 4000 ಮಂದಿ ಉದ್ಯೋಗ ಅವಕಾಶ ಪಡೆದಿದ್ದಾರೆ. ದೇವರ ಆಶೀರ್ವಾದ, ಕುಟುಂಬ ಸದಸ್ಯರ ನಿರಂತರ ಶ್ರಮದ ಫಲವಾಗಿ ಎ.ಜೆ. ಸಮೂಹ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ .
- ಡಾ.ಎ.ಜೆ.ಶೆಟ್ಟಿ,
ಎ.ಜೆ. ಸಮೂಹ ಸಂಸ್ಥೆಗಳ ಅಧ್ಯಕ್ಷರು