ಜಿಲ್ಲೆ

ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸರಳ ವ್ಯಾಯಾಮ

ಹರೀಶ ಎಂ.

ಮಂಗಳೂರು: ವಿಮಾನ ಪ್ರಯಾಣದ ವೇಳೆ ದೇಹ ಹಾಗೂ ಮನಸ್ಸಿಗೆ ಉಲ್ಲಾಸ ನೀಡುವ ಉದ್ದೇಶದಿಂದ ಸೆಂಟ್ರಲ್ ಆರ್ಮ್‌ಡ್ ಪೊಲೀಸ್ ಫೋರ್ಸ್ (ಸಿಐಎಸ್‌ಎಫ್) ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಸರಳ ವ್ಯಾಯಾಮ ಪರಿಕಲ್ಪನೆ ಜಾರಿಗೆ ತಂದಿದೆ.

ಸುದೀರ್ಘ ಪ್ರಯಾಣಕ್ಕೆ ಮುನ್ನ ಕೆಲವು ಸರಳ ವ್ಯಾಯಾಮಗಳನ್ನು ಮಾಡುವಂತೆ ಹಾಗೂ ಆ ಮೂಲಕ ವಿಮಾನ ಯಾನ ಸಂದರ್ಭ ಪ್ರಯಾಣಿಕ ಅನುಭವ ಸುಗಮಗೊಳಿಸುವುದು ಈ ವ್ಯವಸ್ಥೆಯ ಉದ್ದೇಶ. ಕಳೆದ ನಾಲ್ಕ ದಿನಗಳಿಂದ ಇದರ ಅಭ್ಯಾಸ ನಡೆಯುತ್ತಿದೆ

.

ಆಸಕ್ತ ಪ್ರಯಾಣಿಕರಿಗೆ ಸರಳ ವ್ಯಾಯಾಮ ನಡೆಸಲಾಗುತ್ತದೆ. ಸ್ಟ್ರಚ್ಚಿಂಗ್‌ನಂತಹ ಕಸರತ್ತು, ಸ್ನಾಯು ಸೆಳೆತ ಕಡಿಮೆ ಮಾಡುವಂತೆ ಮಾಡುವ ಕ್ರಮ, ರಕ್ತ ಪರಿಚಲನೆ ಹೆಚ್ಚಿಸುವುದು ಹಾಗೂ ಪ್ರಯಾಣಿಕನ ದೇಹದ ವಿವಿಧ ಅವಯವಗಳಿಗೆ ಸೂಕ್ತ ವಿಶ್ರಾಂತಿ ನೀಡುವುದು ಇದರಿಂದ ಸಾಧ್ಯವಾಗಲಿದೆ. ಸಿಐಎಸ್‌ಎಫ್ ಸಿಬಂದಿಯೇ ಇದನ್ನು ನಡೆಸಿ ಕೊಡಲಿದ್ದಾರೆ.