ಜಿಲ್ಲೆ

ಮರವೂರು ಸೇತುವೆ ಬಳಿ ಟಿಪ್ಪರ್ ಡಿಕ್ಕಿ ಕೋಸ್ಟ್‌ಗಾರ್ಡ್ ನಾವಿಕ ಗಂಭೀರ

ಮಂಗಳೂರು: ಮರವೂರು ಸೇತುವೆ ಬಳಿ ಟಿಪ್ಪರ್ ಢಿಕ್ಕಿ ಹೊಡೆದು ಕೋಸ್ಟ್‌ಗಾರ್ಡ್ ಸಿಬಂದಿ ಹರಿಯಾಣ ಮೂಲದ ಭೂಪೇಂದ್ರ ಸಿಂಗ್ (37) ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.


ಕುಂಜತ್ತಬೈಲಿನ ಕೋಸ್ಟ್‌ಗಾರ್ಡ್ ವಸತಿಗೃಹದಲ್ಲಿ ವಾಸವಾಗಿದ್ದ ಅವರು, ಬೆಳಗ್ಗೆ ವಾಕಿಂಗ್‌ಗೆ ಹೋಗಿದ್ದಾಗ ಮರವೂರು ಸೇತುವೆ ಬಳಿ ಟಿಪ್ಪರ್ ಢಿಕ್ಕಿ ಹೊಡೆದಿದೆ. ತತ್‌ಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಳರೋಗಿಯಾಗಿ ದಾಖಲಾಗಿದ್ದಾರೆ. ಕೋಸ್ಟ್‌ಗಾರ್ಡ್‌ನಲ್ಲಿ ನಾವಿಕನಾಗಿದ್ದರು. ಮಂಗಳೂರು ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.