ಜಿಲ್ಲೆ

ಅಪಘಾತಕ್ಕೆ ಖಾಸಗಿ ಶಾಲೆಯ ಶಿಕ್ಷಕಿ ಬಲಿ


ಮಂಗಳೂರು: ನಗರದ ಧಕ್ಕೆಯಲ್ಲಿ ಶುಕ್ರವಾರ ಬೆಳಗ್ಗೆ ಸ್ಕೂಟರ್‌ಗೆ ಕಾರು ಢಿಕ್ಕಿಯಾಗಿ ಶಿಕ್ಷಕಿ ಶಾಹಿದಾ(47) ಮೃತಪಟ್ಟಿದ್ದಾರೆ.


ಅವರು ಕಸ್ಬಾದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು ಬೆಳಗ್ಗೆ ಶಾಲೆಗೆಂದು ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಕಾರು ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಮೃತಪಟ್ಟರು. ಸೋಮೇಶ್ವರ ಪಿಲಾರು ದಾರಂದಬಾಗಿಲಿನ ನಿವಾಸಿಯಾದ ಅವರು ಉಳ್ಳಾಲ ಠಾಣೆಯ ಎಎಸ್‌ಐ ಮಹಮ್ಮದ್ ಅವರ ಪತ್ನಿ.


ಮೃತರು ಪತಿ, ಇಬ್ಬರು ಪುತ್ರಿಯರು ಮತ್ತು ಪುತ್ರನನ್ನು ಅಗಲಿದ್ದಾರೆ.