ಮಂಗಳೂರು: ಹೊಸ ವರ್ಷಾಚರಣೆ ತಂದು ಇಟ್ಟಿದ್ದ ಗಾಂಜಾ, ಕೋಕೆನ್, ಎಂಡಿಎಂಎ, ಚರಸ್ ಸೇರಿದಂತೆ 9 ಲಕ್ಷ ರೂ.ಮೌಲ್ಯದ ಮಾದಕ ವಸ್ತುಗಳನ್ನು ಕಾವೂರು ಪೊಲೀಸರು ವಶಕ್ಕೆ ಪಡೆದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಉಡುಪಿ ಉದ್ಯಾವರದ ಸಂಪಿಗೆ ನಗರ ನಿವಾಸಿ ದೇವರಾಜ್ (37), ಉಡುಪಿ ಕಿನ್ನಿಮೂಲ್ಕಿಯ ಮೊಹಮ್ಮದ್ ಫವೇಜ್ ಉಮರ್ (25), ಉಡುಪಿ ಬ್ರಹ್ಮಗಿರಿಯ ಶೇಖ್ ತಹೀಮ್ (20) ಬಂಧಿತರು. ಪರ್ವೇಜ್ ವಿರುದ್ದ ಉಡುಪಿ ಜಿಲ್ಲೆಯಲ್ಲಿ 3 ಗಾಂಜಾ ಪ್ರಕರಣ ದಾಖಲಾಗಿವೆ. ಈಪ್ರಕರಣದಲ್ಲಿ ಇನ್ನೂ ಹಲವು ಆರೋಪಿಗಳು ಪತ್ತೆ ಮಾಡಲು ಬಾಕಿ ಇದೆ.
ಗಾಂಜಾ5 ಕೆ.ಜಿ., ಎಂಡಿಎಂಎ 100 ಗ್ರಾಂ., ಕೋಕೆನ್ 7 ಗ್ರಾಂ, ಎಂಡಿಎಂಎ ಪಿಲ್ಸ್ 17 ಗ್ರಾಂ, 100 ಗ್ರಾಂ ಚರಸ್, 8 ಗ್ರಾಂ ಹೈಡ್ರೋವಿಡ್ ಗಾಂಜಾ, ಎಲ್‌ಎಸ್‌ಡಿ ಸ್ಟ್ರಿಪ್ 3, ಚಾಕು, ತೂಕ ಮಾಪನ, ಪ್ಲಾಸ್ಟಿಕ್ ಕವರ್ ಹಾಗೂ ಇದನ್ನು ಸಾಗಾಟ ಮಾಡಲು ಉಪಯೋಗಿಸಿದ ಹುಂಡೈ ಕಾರು, ನಂಬರ್ ಇಲ್ಲದ ಸ್ಕೂಟರ್ ವಶಪಡಿಸಿಕೊಂಡಿದ್ದಾರೆ.
ಕಾವೂರು ಇನ್‌ಸ್ಪೆಕ್ಟರ್ ರಾಘವೇಂದ್ರ ಬೈಂದೂರು, ಪಿಎಸ್‌ಐ ಮಲ್ಲಿಕಾರ್ಜುನ ಬಿರಾದಾರ, ಡ್ರಗ್ಸ್ ತಂಡದ ಸಿಬಂದಿ ಸುನಿಲ್, ಬಸವರಾಜ, ಅಶೋಕ್, ಹಾಲೇಶ್, ಆನಂದ ಹಾಗೂ ಸಿಬ್ಬಂದಿ ಪ್ರವೀಣ, ನಾಗರತ್ನ, ನಾಗರಾಜ, ಸುನಿಲ್, ಕಲ್ಲಪ್ಪ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.