ಮಂಗಳೂರು: ಪ್ರತಿಯೊಬ್ಬ ಮಹಿಳೆಯೂ ದೇವಿ ಸಮಾನರು. ಮಹಿಳೆ ತನ್ನ ಮನೆ ಕೆಲಸದ ಜೊತೆಗೆ ಗೃಹರಕ್ಷಕರಾಗಿ ಸಮಾಜದ ಜವಾಬ್ದಾರಿಯನ್ನು ನಿಭಾಯಿಸುವುದು ಪ್ರಶಂಸನೀಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟ ಡಾ.ಮುರಲೀಮೋಹನ್ ಚೂಂತಾರು ಹೇಳಿದರು.
ನವರಾತ್ರಿಯ ಶುಭ ಸಂದರ್ಭದಲ್ಲಿ ದ.ಕ. ಜಿಲ್ಲಾ ಗೃಹರಕ್ಷಕ ದಳ ದಕ್ಷಿಣ ಕನ್ನಡ ಜಿಲ್ಲಾ ಪೌರರಕ್ಷಣಾ ಪಡೆ ಮತ್ತು ಲಯನ್ಸ್ ಕ್ಲಬ್ ಮಂಗಳೂರು ಸಹಭಾಗಿತ್ವದಲ್ಲಿ 9 ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ 9 ಮಹಿಳಾ ಗೃಹರಕ್ಷಕಿಯರನ್ನು ಗುರುತಿಸಿ ಶುಕ್ರವಾರ ಜಿಲ್ಲಾ ಕಚೇರಿಯಲ್ಲಿ ಆಯೋಜಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಲಯನ್ಸ್ ಕ್ಲಬ್ ಮಂಗಳೂರು ಉಪಾಧ್ಯಕ್ಷ ರಾಜೇಶ್ ಕಾಮತ್, ಲಯನ್ಸ್ ಮಾಜಿ ಅಧ್ಯಕ್ಷ ಸತೀಶ್ ರೈ, ಲಯನ್ಸ್ ಖಜಾಂಚಿ ನಾರಾಯಣ ಕೋಟ್ಯಾನ್, ಲಯನ್ಸ್ ಮಾಜಿ ಉಪಾಧ್ಯಕ್ಷೆ ನ್ಯಾನ್ಸಿ ಮಸ್ಕರೀನ್ಹಸ್ ಅವರು ಎಲ್ಲರಿಗೂ ಶಾಲು ಹೊದಿಸಿ, ಹಾರ ಹಾಕಿ, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಗೃಹರಕ್ಷಕಿಯರಾದ ಭಾರತಿ, ಮಲ್ಲಿಕಾ, ಕವಿತಾ, ಸೇಸಮ್ಮ, ಶ್ರುತಿ, ಜಯಶ್ರೀ, ವಾಣಿಶ್ರೀ, ಖತೀಜಮ್ಮ, ಮತ್ತು ಚಿತ್ರಾಕ್ಷಿ ಸನ್ಮಾನ ಸ್ವೀಕರಿಸಿದರು.
ಮಂಗಳೂರು ಘಟಕದ ಸೀನಿಯರ್ ಪ್ಲಟೂನ್ ಕಮಾಂಡರ್ ಮಾರ್ಕ್ ಸೆರಾ ಸ್ವಾಗತಿಸಿದರು. ಗೃಹರಕ್ಷಕ ದಳ ಕಛೇರಿಯ ಕಛೇರಿ ಅಧೀಕ್ಷಕ ಎನ್. ಚಂದ್ರ, ಕಚೇರಿ ಸಿಬ್ಬಂದಿ ಮಂಜುಳಾ ಮತ್ತು ಕಛೇರಿಯ ಗೃಹರಕ್ಷಕಿಯರಾದ ಸುಲೋಚನಾ, ನಿಶಾ ಉಪಸ್ಥಿತರಿದ್ದರು.