ಜಿಲ್ಲೆ

ಹೂಡಿಕೆ ಹೆಸರಿನಲ್ಲಿ ಅಪರಿಚಿತ ಮಹಿಳೆಯಿಂದ 56.64 ರೂ. ವಂಚನೆ

ಮಂಗಳೂರು: ಅಪರಿಚಿತ ಮಹಿಳೆಯೋರ್ವರು ಆನ್‌ಲೈನ್ ಮೂಲಕ ಹೂಡಿಕೆಯ ಹೆಸರಿನಲ್ಲಿ ವ್ಯಕ್ತಿಯೋರ್ವರಿಂದ 56.64 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಬಗ್ಗೆ ಮಂಗಳೂರಿನ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರರ ಫೇಸ್‌ಬುಕ್ ಅಕೌಂಟ್‌ಗೆ ಜುಲೈ ತಿಂಗಳಿನಲ್ಲಿ ಅದಿತಿ ಕಪೂರ್ ಹೆಸರಿನ ಮಹಿಳೆಯೋರ್ವಳಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ದೂರುದಾರರು ಅದಕ್ಕೆ ಸ್ವೀಕೃತಿ(ಅಕ್ಸೆಪ್ಟ್) ನೀಡಿ ಮೆಸೆಂಜರ್ ಮೂಲಕ ಆಕೆಯೊಂದಿಗೆ ಸಂಪರ್ಕದಲ್ಲಿದ್ದರು. ಬಳಿಕ ಮಹಿಳೆ ಮೆಸೆಂಜರ್‌ನಲ್ಲಿ +1 (623) 273-9277 ನಂಬರ್ ಕಳುಹಿಸಿ ಇದು ಪರ್ಸನಲ್ ನಂಬರ್. ಇದರಲ್ಲಿ ವಾಟ್ಸ್‌ಆ್ಯಪ್ ಇದೆ ಎಂದು ತಿಳಿಸಿದ್ದಳು.

ಅನಂತರ ದೂರುದಾರರು ವಾಟ್ಸಪ್‌ನಲ್ಲಿ ಆಕೆಯೊಂದಿಗೆ ಚಾರ್ಟ್ ಮಾಡಿಕೊಂಡಿದ್ದರು. ಕೆಲವು ಸಮಯದ ಅನಂತರ ಮಹಿಳೆ ದೂರುದಾರರಿಗೆ ಇಛ್ಞಿಠ್ಠ್ಟಿ ಎ್ಝಟಚಿಚ್ಝ ಎಟ್ಝ ಇಜಿಠಿಚ್ಝಱ ಎಂಬ ಇನ್‌ವೆಸ್ಟ್‌ಮೆಂಟ್ ಪ್ಲಾೃನ್ ಇದೆ. ಅದರಲ್ಲಿ ನಾನು ಕೂಡ ಹೂಡಿಕೆ ಮಾಡಿದ್ದೇನೆ. ಒಳ್ಳೆಯ ರಿಟರ್ನ್ಸ್ ಬರುತ್ತದೆ. ಹೂಡಿಕೆ ಮಾಡಿದ ಹಣವನ್ನು ಕೆಲವೇ ದಿನಗಳಲ್ಲಿ ಮೂರು ಪಟ್ಟು ಹೆಚ್ಚು ಮಾಡಿಸಿಕೊಡುತ್ತೇನೆ ಎಂದು ನಂಬಿಸಿದಳು. ಅನಂತರ ಲಿಂಕ್‌ವೊಂದನ್ನು ಕಳುಹಿಸಿ ರಿಜಿಸ್ಟ್ರೇಷನ್ ಮಾಡಲು ತಿಳಿಸಿದರು. ಅದರಂತೆ ದೂರುದಾರರು ರಿಜಿಸ್ಟ್ರೇಷನ್ ಮಾಡಿಸಿದ್ದರು. ಬಳಿಕ ಅದಕ್ಕೆ ಹಣ ವರ್ಗಾವಣೆ ಮಾಡುವಂತೆ ಮಹಿಳೆ ತಿಳಿಸಿದ್ದು ಅದರಂತೆ ದೂರುದಾರರು ಮಹಿಳೆ ನೀಡಿದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 56, 64,000 ರೂ.ಗಳನ್ನು ವರ್ಗಾವಣೆ ಮಾಡಿದ್ದಾರೆ. ಕೆಲವು ಸಮಯದ ಅನಂತರ ಹೂಡಿಕೆ ಮಾಡಿದ ಹಣವನ್ನು ವಾಪಸ್ ಪಡೆಯಲು ಮುಂದಾದಾಗ ಸಾಧ್ಯವಾಗಲಿಲ್ಲ. ಆಗ ದೂರುದಾರರಿಗೆ ತಾನು ಮಹಿಳೆಯಿಂದ ಮೋಸ ಹೋಗಿರುವುದು ಗೊತ್ತಾಗಿದೆ.