ಬೀರೂರು: ಪಟ್ಟಣದ ಡಿ.ವಿ.ಹಾಲಪ್ಪ ರಸ್ತೆಯ ಸಂಪಾದನೆ ಮಠದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ರೇಣುಕಾಚಾರ್ಯ ಮಂಗಲಮಂದಿರ ಪ್ರವೇಶ, ಶ್ರೀಚೌಡೇಶ್ವರಿ ದೇವಾಲಯ ಉದ್ಘಾಟನೆ ಹಾಗೂ ರಂಭಾಪುರಿ ಜಗದ್ಗರುಗಳ ಅಡ್ಡಪಲ್ಲಕ್ಕಿ ಉತ್ಸವ ನವೆಂಬರ್ 3 ರಂದು ನಡೆಯಲಿದೆ ಎಂದು ಖಾಸಾಪೀಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಖಾಸಾಶಾಖಾ ಮಠದ ಆವರಣದಲ್ಲಿ ಆಯೋಜಿಸಿದ್ದ ಪ್ರಥಮ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಖಾಸಾಮಠ ಭಕ್ತರೆಲ್ಲರ ಆಶಯಗಳಿಗೆ ಅನುಗುಣವಾಗಿ ಎರಡು ದಶಕಗಳಿಂದ ಧರ್ಮ ಸಂರಕ್ಷಣಿ ಕಾರ್ಯದಲ್ಲಿ ತೊಡಗಿದೆ. ಎಲ್ಲರ ಸಹಕಾರದಿಂದ ಶ್ರೀ ರೇಣುಕಾಚಾರ್ಯ ಮಂಗಲಮಂದಿರ ಪ್ರವೇಶ, ಶ್ರೀಚೌಡೇಶ್ವರಿ ದೇವಾಲಯ ಉದ್ಘಾಟನೆ ಹಾಗೂ ರಂಭಾಪುರಿ ಜಗದ್ಗರುಗಳ ಅಡ್ಡಪಲ್ಲಕ್ಕಿ ಉತ್ಸವ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಸಹ ಎಲ್ಲರ ಸಹಕಾರದಿಂದ ಯಶಸ್ವಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮೀ ಮೋಹನ್, ಉಪಾಧ್ಯಕ್ಷೆ ಎನ್.ಎಂ.ನಾಗರಾಜ್, ಕೆ.ಎಂ.ವಿನಾಯಕ್, ಮಾರ್ಗದ ಮಧು, ವಕೀಲ ವಿಶ್ವಾರಾಧ್ಯ, ಡಾ.ಶಶಿಕಲಾ, ಮರುಳಸಿದ್ದಾರಾಧ್ಯ, ಕುಮಾರಶಾಸೀ, ಶ್ರೀ ಶಿವಾನಂದಾಶ್ರಮ ಟ್ರಸ್ಟ್ ಮತ್ತು ಜಗದ್ಗುರು ರೇಣುಕ ಸಾಂಸ್ಕೃತಿಕ ಸಂಘದ ಪದಾಧಿಕಾರಿಗಳು ವಿವಿಧ ಸಮಾಜದ ಗಣ್ಯರು ಇದ್ದರು.