ಮಂಗಳೂರು: ನಗರದ ಮಂಗಳಾ ಕ್ರೀಡಾಂಗಣ ಅಭಿವೃದ್ಧಿ ಪಡಿಸುವ ಕಾಮಗಾರಿ ಸಂದರ್ಭ ಕ್ರೀಡಾಂಗಣದ ಸುತ್ತಲೂ ಸಾರ್ವಜನಿಕರಿಗೆ ವಾಕಿಂಗ್ ಟ್ರಾೃಕ್ ಮಾಡಿಸಿಕೊಡಬೇಕು ಎನ್ನುವ ಬೇಡಿಕೆ ಇತ್ತಿ. ಈ ನಿಟ್ಟಿನಲ್ಲಿ ವಾಕಿಂಗ್ ಟ್ರಾೃಕ್ ನಿರ್ಮಿಸುವ ಬಗ್ಗೆ ಯೋಜನೆ ರೂಪಿಸಿ ಈಗ ಕಾಮಗಾರಿ ಅಂತಿಮ ಹಂತದಲ್ಲಿ ಇದೆ. ಶೀಘ್ರದಲ್ಲಿ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ತಿಳಿಸಿದರು.
ಮಂಗಳಾ ಕ್ರೀಡಾಂಗಣದ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು ವಾಕಿಂಗ್ ಟ್ರಾೃಕ್ ಗೆ ಸರ್ಕಾರದಿಂದ 1.5 ಕೋಟಿ
ಬಿಡುಗಡೆ ಆಗಿ ಕಾಮಗಾರಿ ಆರಂಭವಾಗಿತ್ತು. ಕಾಮಗಾರಿ ಸ್ಥಳದಲ್ಲಿ ಮಣ್ಣಿನ ರಾಶಿ ಬಿದ್ದಿದ್ದು, ವಾಕಿಂಗ್ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಅಥ್ಲೆಟಿಕ್ ಅಸೋಸಿಯೇಶನ್‌ನ ಪ್ರಮುಖರು ಗಮನಕ್ಕೆ ತಂದಿದ್ದರು. ಕಾಮಗಾರಿಯನ್ನು ಶೀಘ್ರ ಪೂರೈಸಲು ಲೋಕೋಪಯೋಗಿ ಇಲಾಖೆ ಮತ್ತು ಕಾರ್ಪೊರೇಶನ್ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ಅವರು ತಿಳಿಸಿದರು.
ಪಾಲಿಕೆ ಸದಸ್ಯೆ ಸಂಧ್ಯಾ ಮೋಹನ್ , ಕಬಡ್ಡಿ ಅಸೋಸಿಯೇಷನ್‌ನ ಅಧ್ಯಕ್ಷ ಪುರುಷೋತ್ತಮ ಪೂಜಾರಿ ಸದಾನಂದ ಆಳ್ವ, ಅನಿಲ್ ಆಳ್ವ, ಪ್ರೇಮನಾಥ ಶೆಟ್ಟಿ ಕರುಣಾಕರ ರೈ, ತಾರಾನಾಥ ಶೆಟ್ಟಿ, ರೇಖಾ ಶೆಟ್ಟಿ, ಹರಿದಾಸ ಕೂಳೂರು ಪುಷ್ಪರಾಜ್ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.