ಜಿಲ್ಲೆ

ಮಂಗಳ ವಿದ್ಯಾ ಸಂಸ್ಥೆಯಲ್ಲಿ ಕಾರ್ಗಿಲ್ ವಿಜಯೋತ್ಸವ

Mangaluru - Hariprasad Rai


ಮಂಗಳೂರು : ಮಂಗಳ ಸಮೂಹ ವಿದ್ಯಾ ಸಂಸ್ಥೆಯ ಮಂಗಳ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್‌ನ ಎನ್.ಸಿ.ಸಿ. ಘಟಕದ ವತಿಯಿಂದ ಕಾರ್ಗಿಲ್ ವಿಜಯ ದಿನ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿದ್ದ ಮಾಜಿ ಸೈನಿಕ ನೈಬ್ ಸುಭೇದಾರ್ ಎನ್. ಬಿ. ಪಾಟೀಲ್ ಅವರು
ಕಾರ್ಗಿಲ್ ಯುದ್ದದಲ್ಲಿ ಪಾಲ್ಗೊಂಡ ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡರು.
ಸಂಸ್ಥೆಯ ಸ್ಥಾಪಕಾಧ್ಯಕ್ಷ ಡಾ. ಗಣಪತಿ ಪಿ. ಮತ್ತು ಅಧ್ಯಕ್ಷೆ ಅನಿತ.ಜಿ. ಭಟ್ ಅವರ ನಿರ್ದೆಶನದ ಮೇರೆಗೆ ನಡೆದ ಈ ಸಮಾರಂಭದಲ್ಲಿ
ಸಂಸ್ಥೆಯ ಡೀನ್. ಪ್ರೊ ಪ್ರತಿಜ್ಞಾ ಸುಹಾಸಿನಿ ಜಿ. ಆರ್., ಮಂಗಳ ಕಾಲೇಜ್ ಆಫ್ ನರ್ಸಿಂಗ್‌ನ ಪ್ರಾಂಶುಪಾಲ ಪ್ರೊ. ಸುಬ್ರಮಣ್ಯ ನಾಯಕ್, ದೈಹಿಕ ಶಿಕ್ಷಣ ಶಿಕ್ಷಕ ಯೋಗೀಶ್ ಪಟಗಾರ , ಎನ್.ಸಿ.ಸಿ. ಘಟಕದ ಸಂಯೋಜನಾಧಿಕಾರಿ ಕಾವ್ಯ ವೈ, , ಸಲಹೆಗಾರ ಟೋನಿ ಪಿಂಟೊ
ಉಪಸ್ಥಿತರಿದ್ದರು.