ಹುಬ್ಬಳ್ಳಿ : ಇಲ್ಲಿನ ದೇಶಪಾಂಡೆನಗರದ ಶ್ರೀ ಕಾಮಾಕ್ಷಿ ಮಹಿಳಾ ಮಂಡಳದ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ಜರುಗಿತು.
ಅಧ್ಯಕ್ಷರಾಗಿ ಮಂಗಳಾ ಬಿಜಾಪುರ, ಉಪಾಧ್ಯಕ್ಷರಾಗಿ ವಿಜಯ ಕರಂಡಿ, ಕಾರ್ಯದರ್ಶಿಯಾಗಿ ಅನುಸೂಯ ಪಾಟೀಲ, ಸಹ ಕಾರ್ಯದರ್ಶಿಯಾಗಿ ರೇಖಾ ನಿರಂಜನ್, ಕೋಶಾಧ್ಯಕ್ಷರಾಗಿ ಶಕುಂತಲಾ ರೇಷ್ಮೆ, ಸಹ ಕೋಶಾಧ್ಯಕ್ಷರಾಗಿ ಭಾರತಿ ಅಂಗಡಿ, ಕಾರ್ಯಕಾರಿಣಿ ಸದಸ್ಯರಾಗಿ ಕವಿತಾ ಕೋದಾನಪೂರ, ವೀಣಾ ಪಾಟೀಲ, ರೇಣುಕಾ ಗೆಜ್ಜೆಹಳ್ಳಿ, ಶ್ವೇತಾ ಗೌಡರ, ಶೀಲಾ ಮುಪ್ಪಯ್ಯನಮಠ, ಸಲಹೆಗಾರರಾಗಿ ಸುಚಿತಾ ನಾಯ್ಕ, ರಾಧಾ ದೇಸಾಯಿ, ಮೃಣಾಲಿನಿ ಮಠದ, ಪ್ರಭಾ ಹಿರೇಮಠ, ಮೀನಾಕ್ಷಿ ವಂಟಮುರಿ ಆಯ್ಕೆಗೊಂಡಿದ್ದಾರೆ.
ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮಕ್ಕೆ ಲತಾ ಜಮಖಂಡಿ ಅತಿಥಿಯಾಗಿ ಪಾಲ್ಗೊಂಡಿದ್ದರು.