ಜಿಲ್ಲೆ

ಮಂಗಳ ವಿದ್ಯಾ ಸಂಸ್ಥೆಯಲ್ಲಿ ವಿಶ್ವ ಏಡ್ಸ್ ದಿನಾಚರಣೆ

Mangaluru - Hariprasad Rai


ಮಂಗಳೂರು : ನ್ಯೂ ಮಂಗಳ ಕಾಲೇಜ್ ಆಫ್ ನರ್ಸಿಂಗ್ ಮತ್ತು ಮಂಗಳ ಸ್ಕೂಲ್ ಆಫ್ ನರ್ಸಿಂಗ್‌ನ ಸಮುದಾಯ ಆರೋಗ್ಯ ಶುಶ್ರೂಷಾ ವಿಭಾಗ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ನಗರದ ಲಾಲ್‌ಬಾಗ್‌ನ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಲ್ಲಿ ವಿಶ್ವ ಏಡ್ಸ್ ದಿನ ಆಚರಿಸಲಾಯಿತು.
ಏಡ್ಸ್ ಬಗ್ಗೆ ಜಾಗೃತಿ ಮೂಡಿಸುವ ಹಾಡು , ಏಡ್ಸ್ ತಡೆಗಟ್ಟುವ ಬಗ್ಗೆ ಕಿರು ನಾಟಕವನ್ನು ಪ್ರಥಮ ವರ್ಷದ ಜಿಎನ್‌ಎಂ ನರ್ಸಿಂಗ್ ಪ್ರದರ್ಶಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಸಮುದಾಯ ಆರೋಗ್ಯ ಶುಶ್ರೂಷಾ ವಿಭಾಗದ ಮುಖ್ಯಸ್ಥೆ ಪ್ರೊ.ಶ್ವೇತ ಕಿರಣ್, ಎನ್‌ಎಸ್‌ಎಸ್ ಘಟಕದ ಅಧಿಕಾರಿ ನವೀನ್.ಪಿ., ಉಪನ್ಯಾಸಕರಾದ ಅಕ್ಷಿತಾ, ಕೃಷ್ಣ ಪ್ರಿಯ ಉಪಸ್ಥಿತರಿದ್ದರು. ನಸಿಂಗ್ ವಿದ್ಯಾರ್ಥಿ ದರ್ಶನ್ ಸ್ವಾಗತಿಸಿದರು.
ಪರೀಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.