ಹುಬ್ಬಳ್ಳಿ: ಬಸವ ಕೇಂದ್ರದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಇಲ್ಲಿಯ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಸಹಯೋಗದಲ್ಲಿ ಫೆ. 23ರಂದು ಬೆಳಗ್ಗೆ 11ಕ್ಕೆ ನಗರದ ಅಕ್ಷಯ ಕಾಲನಿ 4ನೇ ಹಂತ, ಚೇತನ ಕಾಲೇಜು ಹತ್ತಿರ ಡಾ. ಸುರೇಶ ಧರಮಪ್ಪ ಹೊರಕೇರಿ ಅವರ ಮನೆಯಲ್ಲಿ ಏರ್ಪಡಿಸಲಾಗಿದೆ.
ಶರಣ ಹರ್ಡೇಕರ ಮಂಜಪ್ಪನವರ ಜಯಂತಿ ಹಾಗೂ ಶಿಕ್ಷಕ ಧರಮಪ್ಪ ಹೊರಕೇರಿ ಅವರ ಜಯಂತಿ ಅಂಗವಾಗಿ ಉಪನ್ಯಾಸ ನಡೆಯಲಿದೆ. ನಿವೃತ್ತ ಪ್ರಾಚಾರ್ಯ, ಸಾಹಿತಿ ಪ್ರೊ. ಎಸ್.ಆರ್. ಆಶಿ ಅವರು ಶರಣ ಸಕಳೇಶ ಮಾದರಸ ವಚನಗಳು ಕುರಿತು, ಬಸವ ಕೇಂದ್ರದ ಅಧ್ಯಕ್ಷ ಪ್ರೊ. ಜಿ.ಬಿ. ಹಳ್ಯಾಳ ಅವರು ಶರಣ ಹರ್ಡೇಕರ ಮಂಜಪ್ಪನವರ ಕುರಿತು, ಬಸವ ಪರಿಸರ ಸಂರಣಾ ಸಮಿತಿ ಅಧ್ಯ ಪ್ರೊ. ಎಸ್.ವಿ. ಪಟ್ಟಣಶೆಟ್ಟಿ ಅವರು ಶಿಕ್ಷಕ ಧರಮಪ್ಪ ಹೊರಕೇರಿ ಅವರ ಕುರಿತು ಉಪನ್ಯಾಸ ನೀಡುವರು.
ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿ ಅಧ್ಯ ಪ್ರೊ. ಎಸ್.ಎಂ. ಸಾತ್ಮಾರ ಅಧ್ಯಕ್ಷತೆ ವಹಿಸುವರು. ಪ್ರಾಚಾರ್ಯರಾದ ಡಾ. ಲಿಂಗರಾಜ ಹೊರಕೇರಿ, ಡಾ. ಮಹೇಶ ಹೊರಕೇರಿ, ಶಿಕ್ಷಕಿ ಶಕುಂತಲಾ, ಉಪನ್ಯಾಸಕಿ ಜಯಶ್ರೀ ಉಪಸ್ಥಿತರಿರುವರು. ದಾನೇಶ್ವರಿ ಸಂಗೀತ ಪಾಠಶಾಲೆಯ ಶಿಕ್ಷಕಿ ಪ್ರೊ. ಶೋಭಾ ಜಾಬಿನ ವಚನಗಳನ್ನು ಪ್ರಸ್ತುತಪಡಿಸುವರು.