ಪಾಂಡವಪುರ: ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಹುಟ್ಟಹಬ್ಬದ ಅಂಗವಾಗಿ ಜೆಡಿಎಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ರೋಗಿಗಳಿಗೆ, ವೃದ್ಧಾಶ್ರಮದ ವೃದ್ಧರಿಗೆ ಹಣ್ಣು-ಹಂಪಲು ವಿತರಣೆ ಹಾಗೂ ಅಂಗವಿಕಲ ಮಕ್ಕಳಿಗೆ ಊಟದ ವ್ಯವಸ್ಥೆ ಮತ್ತು ಹಲವು ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಎದುರು ಜಮಾಯಿಸಿದ ನೂರಾರು ಕಾರ್ಯಕರ್ತರು, ಆಸ್ಪತ್ರೆಯ ಒಳ ಹಾಗೂ ಹೊರ ರೋಗಿಗಳಿಗೆ ಜಿಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಅಶೋಕ್, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ಎ.ಮಲ್ಲೇಶ್ ಅವರ ನೇತೃತ್ವದಲ್ಲಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಮಾಡಿದರು.
ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್ ಮಾತನಾಡಿ, ಕ್ಷೇತ್ರದ ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು ಅವರ ಹುಟ್ಟುಹಬ್ಬದ ಅಂಗವಾಗಿ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಮಾಡಿ ಸರಳವಾಗಿ ಆಚರಣೆ ಮಾಡಲಾಗಿದೆ.
ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ ಸಿ.ಎಸ್.ಪುಟ್ಟರಾಜು ಅವರು ಜಿಪಂ ಸದಸ್ಯರಾಗಿ, ಮೂರು ಬಾರಿ ಶಾಸಕರಾಗಿ, ಸಂಸದ, ಸಚಿವರಾಗಿ ಉತ್ತಮವಾಗಿ ಕೆಲಸ ಮಾಡಿ ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿಪಡಿಸುವ ಮೂಲಕ ಅಪಾರ ಜನಮೆಚ್ಚುಗೆ ಪಡೆದುಕೊಂಡಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ, ಸಿ.ಎಸ್.ಪುಟ್ಟರಾಜು ಅವರು ಮಾಡದ ಅಭಿವೃದ್ಧಿ ಕೆಲಸಗಳಿಲ್ಲ ಎನ್ನುವಷ್ಟರ ಮಟ್ಟಕ್ಕೆ ರಾಜ್ಯದಲ್ಲಿ ಹೆಸರುಗಳಿಸಿದ್ದಾರೆ. ರಾಜ್ಯದಲ್ಲಿ ಭೀಕರವಾದ ಬರಗಾಲ ಎದುರಾಗಿರುವುದರಿಂದ ಹುಟ್ಟುಹಬ್ಬವನ್ನು ಸರಳವಾಗಿ ಆಚರಣೆ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಆರ್.ಸೋಮಶೇಖರ್ ಮಾತನಾಡಿ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಹುಟ್ಟುಹಬ್ಬವನ್ನು ಬರಗಾಲದ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಆಚರಣೆ ಮಾಡುತ್ತಿದ್ದೇವೆ. ಸಿ.ಎಸ್.ಪುಟ್ಟರಾಜು ಅವರು ಶಾಸಕ, ಸಚಿವರಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸಣ್ಣಹಳ್ಳಿಯಂತಿದ್ದ ಪಾಂಡವಪುರ ಪಟ್ಟಣವನ್ನು ನಗರವನ್ನಾಗಿ ಅಭಿವೃದ್ಧಿಪಡಿಸಿದರು. ಮೈಸೂರು ನಗರ ಸರಿಸಮವಾಗಿ ನಿರ್ಮಿಸಬೇಕೆಂದು ಕನಸು ಕಂಡಿದ್ದರು. ಮುಂದಿನ ದಿನಗಳಲ್ಲಿ ಮತ್ತೆ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗಿ ಸಚಿವರಾಗಿ ರಾಜ್ಯ ಮೆಚ್ಚುವ ಹಲವಾರು ಅಭಿವೃದ್ಧಿ ಕೆಲಸ ಮಾಡಲೆಂದು ಹಾರೈಸಿದರು.
ಮುಖಂಡ ಎಂ.ಗಿರೀಶ್ ಮಾತನಾಡಿದರು.
ಆಸ್ಪತ್ರೆಯ ಪೌರಕಾರ್ಮಿಕ ಮಹಿಳಾ ಸಿಬ್ಬಂದಿಗೆ ಜಿಪಂ ಮಾಜಿ ಸದಸ್ಯ ಸಿ.ಅಶೋಕ್ ಅವರು ಗೌರವಧನ, ಹಣ್ಣು-ಹಂಪಲು ವಿತರಿಸಿದರು.
ಜಿಪಂ ಮಾಜಿ ಸದಸ್ಯ ಸಿ.ಅಶೋಕ್, ಟಿಎಪಿಸಿಎಂಎಸ್ ಅಧ್ಯಕ್ಷ ಚಿಕ್ಕಾಡೆ ಗಿರೀಶ್, ಮುಖಂಡರಾದ ಚಿಕ್ಕಾಡೆ ಸಿ.ಜಿ.ಪ್ರಸನ್ನಕುಮಾರ್, ಸಾಮಿಲ್ ಚೇತನ್ ತಿಮ್ಮೇಗೌಡ, ಟಿಎಪಿಸಿಎಂಎಸ್ ನಿರ್ದೇಶಕರಾದ ವಡ್ಡರಹಳ್ಳಿ ನಿಂಗೇಗೌಡ, ಆದರ್ಶ, ಅರಳಕುಪ್ಪೆ ಮಹದೇವು, ಎಚ್‌ಎಸ್‌ವಿ ಸ್ವಾಮೀಗೌಡ, ಅಲ್ಪಳ್ಳಿ ಗೋವಿಂದಯ್ಯ, ಮಾಣಿಕ್ಯನಹಳ್ಳಿ ಅಶೋಕ್, ಅಶ್ವಥ್ ಕುಮಾರೇಗೌಡ, ರಾಮಕೃಷ್ಣೇಗೌಡ, ಬೊಮ್ಮರಾಜು, ಎಂ.ಎಸ್.ಜಗದೀಶ್, ಗಡ್ಡ ರಮೇಶ್, ಚಲುವೇಗೌಡ, ಅರವಿಂದ್, ಉಮೇಶ್, ರಾಮಚಂದ್ರು, ಟೌನ್ ಚಂದ್ರು, ಗುರು, ಶಶಿ, ಪ್ರಶಾಂತ್, ಜ್ಯೋತಿಲಕ್ಷ್ಮೀ, ಅರ್ಚನ, ಸುನೀತಾ, ಗೀತ ಅರ‌್ಮುಗನ್, ಪುರಸಭೆ ಮಾಜಿ ಸದಸ್ಯರು, ಮುಖಂಡರು ಹಾಜರಿದ್ದರು.
ವಿಶೇಣ ಪೂಜೆ: ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಹುಟ್ಟುಹಬ್ಬದ ಅಂಗವಾಗಿ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ಅಭಿಮಾನಿಗಳು ಗ್ರಾಮದ ಗಣಪತಿ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ನೆಚ್ಚಿನ ನಾಯಕರ ಹುಟ್ಟುಹಬ್ಬಕ್ಕೆ ಶುಭಕೋರಿದರು. ಬಳಿಕ ದೇವಸ್ಥಾನದ ಮುಂಭಾಗ ಅಭಿಮಾನಿಗಳು ಸಾಂಕೇತಿಕವಾಗಿ ಕೇಕ್ ಕತ್ತರಿಸಿ ಸಂಭ್ರಮಿಸಿದರು.
ಮನ್‌ಮುಲ್ ನಿರ್ದೇಶಕ ಸಿ.ಶಿವಕುಮಾರ್, ಜಿಪಂ ಮಾಜಿ ಸದಸ್ಯ ಸಿ.ಅಶೋಕ್, ಸೊಸೈಟಿ ಅಧ್ಯಕ್ಷ ಸಿ.ಎಸ್.ಗೋಪಾಲಗೌಡ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.
ವೃದ್ಧರಿಗೆ ಹಣು-್ಣಹಂಪಲು ವಿತರಣೆ:
ಸಿ.ಎಸ್.ಪುಟ್ಟರಾಜು ಅವರ ಹುಟ್ಟುಹಬ್ಬದ ಅಂಗವಾಗಿ ತಾಲೂಕಿನ ಹಾಗನಹಳ್ಳಿ ಗ್ರಾಮದಲ್ಲಿ ಇರುವ ಅಮ್ಮನ ಆಸರೆ ವೃದ್ದಾಶ್ರಮದಲ್ಲಿ ಪಾಂಡವ ಸಿಎಸ್‌ಪಿ ಯುವ ಬಳಗದ ವತಿಯಿಂದ ವೃದ್ಧಾಶ್ರಮದಲ್ಲಿ ವೃದ್ಧರಿಗೆ ಹಣ್ಣು-ಹಂಪಲು ವಿತರಣೆ ಮಾಡಿದರು.
ಸಿಎಸ್‌ಪಿ ಯುವ ಬಳಗದ ಪದಾಧಿಕಾರಿಗಳಾದ ಕಾಮನಾಯಕನಹಳ್ಳಿ ರಾಮಚಂದ್ರು, ಮೇಲುಕೋಟೆ ಬಸವರಾಜು, ಕೆರೆತೊಣ್ಣೂರು ರಮೇಶ್, ದೇವೇಗೌಡನಕೊಪ್ಪಲು ಅರವಿಂದ್, ದೀಪುಬೆಟ್ಟಹಳ್ಳಿ, ಕಣಿವೆಕೊಪ್ಪಲು ರವಿ, ಅರಳಕುಪ್ಪೆ ಚಿದಾನಂದ್, ರವಿ, ನಿರಂಜನ್, ಕೃಷ್ಣಮೂರ್ತಿ, ರವಿಕಾಳೇಗೌಡನಕೊಪ್ಪಲು, ಮಹದೇವು, ಅಭಿ, ಬಕೋಡಿ,ಲೋಕೇಶ, ದೇವೇಗೌಡ, ಪುಟ್ಟರಾಜು, ಚೇತನ್, ರಾಜೇಶ್ ಪಾಂಡವಪುರ, ಸುನಿಲ್ ಮತ್ತಿತರರು ಹಾಜರಿದ್ದರು.
ಫ್ಲೆಕ್ಸ್, ಕಟೌಟ್ ಜೋರು: ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಅಭಿಮಾನಿಗಳು, ಕಾರ್ಯಕರ್ತರು, ಮುಖಂಡರು ಪ್ಲೆಕ್ಸ್, ಕಟೌಟ್ ಹಾಕುವ ಮೂಲಕ ಶುಭಕೋರಿದರು. ಪಟ್ಟಣದ ಐದುದೀಪದ ವೃತ್ತ, ಮಂಡ್ಯ ಸರ್ಕಲ್, ಸಿ.ಎಸ್.ಪುಟ್ಟರಾಜು ಮನೆ ಸೇರಿದಂತೆ ಬೀದಿಬೀದಿಗಳಲ್ಲೂ ಪ್ಲೆಕ್ಸ್, ಬ್ಯಾನರ್ ಹಾಕಿ ಶುಭಕೋರಿದರೆ ಗ್ರಾಮಗಳಲ್ಲಿ ಆಯಾ ಮುಖಂಡರು ಪ್ಲೆಕ್ಸ್, ಬ್ಯಾನರ್ ಹಾಕುವ ಮೂಲಕ ಅಭಿಮಾನ ಮೆರೆದರು.