ನಾಗಮಂಗಲ: ಮಾತನಾಡುವವರೆಲ್ಲ ಕೆಲಸ ಮಾಡಲ್ಲ. ಆದರೆ, ನಾನು ಮಾಡಿರುವ ಅಭಿವೃದ್ಧಿ ಕೆಲಸಗಳೇ ಜನರ ಬಾಯಲ್ಲಿ ಬರುತ್ತಿವೆಯೇ ಹೊರತು ನಾನೇ ಹೇಳಿಕೊಳ್ಳುವ ಅಗತ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ತಾಲೂಕಿನ ಅಳಿಸಂದ್ರದದಲ್ಲಿ ಕೋಡಿಮಾರಮ್ಮ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.
ಅಳಿಸಂದ್ರ ಗ್ರಾಮದ ಜನರು ರಾಜಕೀಯವಾಗಿ ಹಾಗೂ ಶೈಕ್ಷಣಿಕವಾಗಿ ಮುಂದುವರಿದಿದ್ದಾರೆ. ಜನರಿಗೆ ನಿರಂತರವಾಗಿ ಒಳ್ಳೆಯದಾದರೆ ಸುಮ್ಮನಿರಲ್ಲ ಎಂದು ಪ್ರಕೃತಿ ಹಾಗೂ ದೇವರು ಆಗ್ಗಿಂದಾಗೆ ಕಷ್ಟ-ಸುಖಗಳೆರಡನ್ನು ನೀಡುತ್ತವೆ. ಅದರಂತೆ ಈಗ ನಮಗೆ ಬರಗಾಲ ಎದುರಾಗಿದೆ. ಎಲ್ಲ ಒಳ್ಳೆಯದೆ ಆಗುತ್ತಿದ್ದರೆ ಜನರನ್ನು ಹಿಡಿದು ನಿಲ್ಲಿಸಲು ಸಾಧ್ಯವಾಗುವುದಿಲ್ಲ ಎಂದರು.
ಅಳಿಸಂದ್ರದ ಅಭಿವೃದ್ಧಿಗೆ ನಾನು ಬಹಳಷ್ಟು ಕೆಲಸ ಮಾಡಿದ್ದೇನೆ. ಕೆಲಸ ಮಾಡಿರುವವರನ್ನು ನೆನಪಿಸಿಕೊಳ್ಳಬೇಕು. ಗ್ರಾಮಕ್ಕೆ ಬಂದು ಮಾತನಾಡುವವರು ಏನು ಮಾಡಿಲ್ಲ. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿ ಮನೆಗೂ ಅನುಕೂಲ ಮಾಡಿಕೊಟ್ಟಿದೆ. ಇದನ್ನು ಬೇರೆಯವರು ನಾವು ಕೊಟ್ಟಿದ್ದು ಎಂದು ಹೇಳಲು ಸಾಧ್ಯವಿಲ್ಲ.ನಾವು ಮಾತು ಕೊಟ್ಟಂತೆ ನಡೆದುಕೊಂಡಿದ್ದೇವೆ ಎಂದರು.
ಗ್ರಾಮದಲ್ಲಿ ಅಳವಡಿಸಲಾದ ಹೈಮಾಸ್ಟ್ ಬೀದಿ ದೀಪಕ್ಕೆ ಚಾಲನೆ ನೀಡಿದರು. ಮುಖಂಡರಾದ ದಿನೇಶ್ ಇತರರು ಇದ್ದರು.