ಮದ್ದೂರು ನಗರದಲ್ಲಿ ಹೆಚ್ಚಿರುವ ನಾಯಿಗಳ ಉಪಟಳ ನಿಯಂತ್ರಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಗಳವಾರ ನಗರಸಭೆಯಲ್ಲಿ ಪೌರಾಯುಕ್ತೆ ರಾಧಿಕಾ ಅವರಿಗೆ ಮನವಿ ಸಲ್ಲಿಸಿದರು. ರಾಮಚಂದ್ರೇಗೌಡ, ಮಹದೇವ, ಗೀತಾ, ಮಾದೇಶ್, ನಾಗಣ್ಣ ಇದ್ದರು.  
ಮಂಡ್ಯ

ಬೀದಿ ನಾಯಿ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ

ಪೌರಾಯುಕ್ತೆ ರಾಧಿಕಾಗೆ ಕರವೇ ಮನವಿ

ಮದ್ದೂರು: ನಗರದಲ್ಲಿ ಹೆಚ್ಚಿರುವ ನಾಯಿಗಳ ಉಪಟಳ ನಿಯಂತ್ರಿಸಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಗಳವಾರ ನಗರಸಭೆಯಲ್ಲಿ ಪೌರಾಯುಕ್ತೆ ರಾಧಿಕಾ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಕರವೇ ತಾಲೂಕು ಅಧ್ಯಕ್ಷ ಮಣಿಗೆರೆ ರಾಮಚಂದ್ರೇಗೌಡ ಮಾತನಾಡಿ, ನಗರದ ವ್ಯಾಪ್ತಿಯಲ್ಲಿ ನಾಯಿಗಳ ಹಾವಳಿಯಿಂದ ಜನ ಸಾಮಾನ್ಯರು ನೆಮ್ಮದಿಯಾಗಿ ರಸ್ತೆಯಲ್ಲಿ ಸಂಚಾರ ಮಾಡಲು ಆಗುತ್ತಿಲ್ಲ. ಹಲವಾರು ಬಾರಿ ವಾನಹಗಳಿಗೆ ಏಕಾಏಕಿ ಅಡ್ಡಬಂದ ಪರಿಣಾಮ ವಾಹನ ಸವಾರರು ಬಿದ್ದು ಗಾಯಗೊಂಡಿರುವ ನಿದರ್ಶನಗಳು ಸಾಕಷ್ಟಿವೆ. ಮುಂಜಾನೆ ಪತ್ರಿಕೆ ಹಾಕುವ ಹುಡುಗರಿಗೂ ಸಮಸ್ಯೆ ಉಂಟಾಗಿದೆ ಎಂದರು.

ನಾಯಿಗಳು ಗುಂಪು ಗುಂಪಾಗಿ ಬರುವುದರಿಂದ ವಯೋವೃದ್ಧರು, ಮಹಿಳೆರು, ಮಕ್ಕಳು ರಸ್ತೆಯಲ್ಲಿ ಭಯಭೀತರಾಗಿ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಜತೆಗೆ ಬೋಗಳುವುದು, ಕಚ್ಚುವುದು, ಕಲುಷಿತ ವಸ್ತುಗಳನ್ನು ಎಳೆದುಕೊಂಡು ಬಂದು ರಸ್ತೆಯಲ್ಲಿ ತಿನ್ನುವುದು ಸೇರಿದಂತೆ ಹಲವು ಸಮಸ್ಯೆಗಳು ನಾಯಿಗಳಿಂದ ಜನರನ್ನು ಎದುರುರಿಸುತ್ತಿದ್ದಾರೆ. ನಗರಸಭಾ ಅಧಿಕಾರಿಗಳು ಕಾನೂನಾತ್ಮಕವಾಗಿ ನಾಯಿಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ನಗರಸಭಾ ಪೌರಾಯುಕ್ತೆ ರಾಧಿಕಾ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕರವೇ ನಗರ ಘಟಕದ ಅಧ್ಯಕ್ಷ ಮಹಾದೇವು, ಪದಾಧಿಕಾರಿಗಳಾದ ಗೀತಾ, ಗುರುದೇವರಹಳ್ಳಿ ಮಾದೇಶ್, ಮದ್ದೂರು ನಾಗಣ್ಣ, ಮಹದೇವ ಇದ್ದರು.