ಕೆ.ಆರ್.ಸಾಗರ: ಹುಲಿಕೆರೆ ಗ್ರಾಮದ ಬಿಜಿಎಸ್ ಬಾಲ ಜಗತ್ ಶಾಲೆಯಲ್ಲಿ ಶನಿವಾರ ಆಹಾರ ಮೇಳ ಹಮ್ಮಿಕೊಳ್ಳಲಾಗಿತ್ತು.
ವಿವಿಧ ತರಗತಿಗಳ ವಿದ್ಯಾರ್ಥಿಗಳಿಂದ ಏರ್ಪಡಿಸಲಾಗಿದ್ದ ಆಹಾರ ಮೇಳಕ್ಕೆ ಮುಖ್ಯ ಶಿಕ್ಷಕಿ ಆಶಾ ಚಾಲನೆ ನೀಡಿದರು. ಅಹಾರ ಮೇಳದಲ್ಲಿನ ಪ್ರತಿ ಕೊಠಡಿಗೆ ತೆರಳಿ ವೀಕ್ಷಣೆ ಮಾಡಿ ವಿದ್ಯಾರ್ಥಿಗಳಿಂದ ವ್ಯಾಪಾರಕ್ಕೆ ಸಿದ್ಧವಾಗಿರುವ ವಿವಿಧ ತಿಂಡಿ-ತಿನಿಸುಗಳನ್ನು ಸವಿದು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು. ಆಹಾರ ಮೇಳ ಆಯೋಜನೆಯಿಂದ ವಿದ್ಯಾರ್ಥಿಗಳಲ್ಲಿ ಓದಿನ ಜತೆಗೆ ವ್ಯವಹಾರಿಕ ಜ್ಞಾನ ಬೆಳೆಯಲಿದೆ ಎಂದರು.
ಪಾಲಕರು ಆಹಾರ ಮೇಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳು ಮಾರಾಟ ಮಾಡುತ್ತಿದ್ದ ತಿನಿಸುಗಳನ್ನು ಖರೀದಿಸಿದರು. ಬ್ರೆಡ್ ರೋಲ್, ಟೋಸ್ಟ್, ಓರಿಯೊ ರೊಲೆ, ಬಾಳೆ ಹಣ್ಣಿನಿಂದ ತಯಾರಿಸಿದ ಮಿಲ್ಕ್ ಶೇಕ್, ಚುರಮುರಿ, ಪಾನಿಪುರಿ, ಗುಲಾಬ್ ಜಾಮೂನ್, ಮಶ್ರೂಮ್, ಗೋಬಿ, ಬೇಲ್ಪುರಿ, ಧಹಿಪುರಿ, ಕಚೋರಿ, ಮಸಾಲೆ ವಡೆ, ವಿವಿಧ ರೀತಿಯ ಪಾನೀಯಗಳನ್ನು ತಯಾರಿಸಿ ಮಾರಾಟ ಮಾಡಿದರು.
ಶಾಲೆಯ ವ್ಯವಸ್ಥಾಪಕ ಅಭಿ, ಶಿಕ್ಷಕರು, ಸಿಬ್ಬಂದಿ, ಪಾಲಕರು ಇದ್ದರು.