ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದ ಪ್ರೊ. ಕೆ.ವೆಂಕಟಗಿರಿಗೌಡ ಸಭಾಂಗಣದಲ್ಲಿ ಭಾನುವಾರ ಕರುನಾಡ ಕನ್ನಡ ಕಲಾ ಸಿರಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಮಳವಳ್ಳಿ ತಾಲೂಕಿನ ದಬ್ಬಹಳ್ಳಿ ಗ್ರಾಮದ ಬಸವರಾಜು ಅವರನ್ನು ಬಳಗದ ರಾಜ್ಯ ಸಂಚಾಲಕರಾಗಿ ನೇಮಿಸಿ 2026ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ. ಪ್ರಶಾಂತ್ ಚಕ್ರವರ್ತಿ, ಡಾ. ಟಿ.ಯಲ್ಲಪ್ಪ, ಡಾ. ಅಂಬರೀಷ್, ತ್ಯಾಗರಾಜು ಇದ್ದರು.  
ಮಂಡ್ಯ

ಬಸವರಾಜುಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವ

ಕನ್ನಡ ರಾಜ್ಯೋತ್ಸವ ಸಮಾರಂಭ

ಮಳವಳ್ಳಿ: ಕನ್ನಡಪರ ಹೋರಾಟ ಮತ್ತು ಸಮಾಜ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ತಾಲೂಕಿನ ದಬ್ಬಹಳ್ಳಿ ಗ್ರಾಮದ ಬಸವರಾಜು ಅವರಿಗೆ ಪ್ರತಿಷ್ಠಿತ ಗೌರವ ಲಭಿಸಿದೆ.

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದ ಪ್ರೊ. ಕೆ.ವೆಂಕಟಗಿರಿಗೌಡ ಸಭಾಂಗಣದಲ್ಲಿ ಭಾನುವಾರ ಕರುನಾಡ ಕನ್ನಡ ಕಲಾ ಸಿರಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಬಸವರಾಜು ಅವರನ್ನು ಬಳಗದ ರಾಜ್ಯ ಸಂಚಾಲಕರಾಗಿ ನೇಮಿಸಿ, 2026ನೇ ಸಾಲಿನ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರ್ನಾಟಕ ಜನಸೇವಾ ಟ್ರಸ್ಟ್ ಸಂಸ್ಥಾಪಕ ಡಾ. ಪ್ರಶಾಂತ್ ಚಕ್ರವರ್ತಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಗದ ಗೌರವಾಧ್ಯಕ್ಷ ಡಾ. ಟಿ.ಯಲ್ಲಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು. ಬಳಗದ ರಾಜ್ಯಾಧ್ಯಕ್ಷ ಡಾ. ಅಂಬರೀಷ್ ಸಿ.ಎಂ., ಉಪಾಧ್ಯಕ್ಷ ಮನು, ಡಾ. ಟಿ. ತ್ಯಾಗರಾಜು ಸೇರಿದಂತೆ ಹಲವು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತರು ಸಮಾರಂಭದಲ್ಲಿ ಉಪಸ್ಥಿತರಿದ್ದರು.