ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಭೂಮಿಪೂಜೆ ನೆರವೇರಿಸಿದರು. ಬಾಬುಕೃಷ್ಣ ದೇವ್, ಪ್ರಶಾಂತ್, ಶಿವಕುಮಾರ್, ಕುಂತೂರು ಗೋಪಾಲ್, ಚಂದ್ರಕುಮಾರ್, ಹುಸ್ಕೂರು ಕೃಷ್ಣಮೂರ್ತಿ ಇತರರಿದ್ದರು.  
ಮಂಡ್ಯ

ಪೊಲೀಸರ ಭದ್ರತೆಯಲ್ಲಿ ನಾಲೆ ಕಾಮಗಾರಿ ಶೀಘ್ರ ಆರಂಭ

ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಹೇಳಿಕೆ

ವಿಜಯವಾಣಿ ಸುದ್ದಿಜಾಲ ಹಲಗೂರು

ಭೀಮಾ ಜಲಾಶಯ ಯೋಜನೆ ಜಾರಿಯಾದರೆ ವಿರೋಧಿಗಳಿಗೆ ಹಿನ್ನಡೆಯಾಗಲಿದೆ ಎಂಬ ರಾಜಕೀಯ ಕಾರಣದಿಂದ ದಳವಾಯಿ ಕೋಡಿಹಳ್ಳಿ ಕೆರೆಗೆ ನೀರು ತುಂಬಿಸಲು ಆಗಿಲ್ಲ ಎಂದು ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಸಮೀಪದ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮ ವತಿಯಿಂದ 1 ಕೋಟಿ ರೂ.ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಭೀಮಾ ಜಲಾಶಯ ತುಂಬಿಸಲು 300 ಮೀಟರ್ ನಾಲೆ ನಿರ್ಮಾಣ ಕಾಮಗಾರಿ ಮಾತ್ರ ಬಾಕಿ ಉಳಿದಿದೆ. ವಿರೋಧ ಪಕ್ಷಗಳ ಕುತಂತ್ರದಿಂದ ಕಾಮಗಾರಿ ಪೂರ್ಣಗೊಂಡಿಲ್ಲ. ಯೋಜನೆಗೆ ಸಂಬಂಧಿಸಿದ ಭೂ ಸ್ವಾಧೀನ ಪರಿಹಾರದ ಹಣವನ್ನು ಈಗಾಗಲೇ ಬಿಡುಗಡೆ ಮಾಡಿಸಲಾಗಿದೆ. ಸುತ್ತಮುತ್ತಲಿನ ಗ್ರಾಮಗಳ ರೈತರ ಹಿತದೃಷ್ಟಿಯಿಂದ ಸದ್ಯದಲ್ಲೇ ಪೊಲೀಸರ ಭದ್ರತೆಯಲ್ಲಿ ನಾಲೆ ಕಾಮಗಾರಿ ಆರಂಭಿಸಿ ಕೆರೆ ತುಂಬಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಕಾವೇರಿ ನೀರಾವರಿ ನಿಗಮದ ಕಾರ್ಯ ನಿರ್ವಾಹಕ ಇಂಜಿನಿಯರ್ ಬಾಬುಕೃಷ್ಣ ದೇವ್, ಎಇಇ ಪ್ರಶಾಂತ್, ಎಇ ಶಿವಕುಮಾರ್, ಕಾಂಗೆಸ್ ಮುಖಂಡರಾದ ಕುಂತೂರು ಗೋಪಾಲ್, ಚಂದ್ರಕುಮಾರ್, ಹುಸ್ಕೂರು ಕೃಷ್ಣಮೂರ್ತಿ, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಮಾದೇಶ್, ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕಿ ಶ್ವೇತಾ ಕುಮಾರ್, ಮುಖಂಡರಾದ ದೇವಿರಹಳ್ಳಿ ಕುಮಾರ್, ಮೋಹನ್ ಕುಮಾರ್, ಶಿವಸ್ವಾಮಿ, ಬಾಳೆಹೊನ್ನಿಗ ಕುಮಾರ್, ಪ್ರಕಾಶ್, ರವೀಶ್ ಇತರರಿದ್ದರು.