ಕೇಂದ್ರ ಸರ್ಕಾರ ಕಬ್ಬಿಗೆ ದರ ನಿಗದಿ ಮಾಡುವ ತನಕ ಕಾರ್ಖಾನೆಯಿಂದ ಸಕ್ಕರೆಯನ್ನು ಬೇರೆ ರಾಜ್ಯಗಳಿಗೆ ಸರಬರಾಜು ಮಾಡಬಾರದೆಂದು ಆಗ್ರಹಿಸಿ ರಾಜ್ಯ ರೈತ ಸಂಘದ ವತಿಯಿಂದ ತಾಲೂಕಿನ ಕೊಪ್ಪ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಗೋದಾಮಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಯಿತು. ವಿನೋದ್‌ಬಾಬು, ಸ್ವಾಮಿ, ವೆಂಕಟಪ್ಪ, ಶಿವಕುಮಾರ್, ರಾಜಣ್ಣ, ರವಿ, ರಾಮಕೃಷ್ಣ, ಶಿವಲಿಂಗಯ್ಯ, ಪ್ರಸನ್ನ, ಕುಮಾರ, ಪ್ರಸನ್ನ, ಕುಮಾರ್ ಇದ್ದರು. 
ಮಂಡ್ಯ

ಟನ್ ಕಬ್ಬಿಗೆ 5,500 ರೂ. ನೀಡಲು ಆಗ್ರಹ

ಕೊಪ್ಪ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಗೋದಾಮಿಗೆ ಬೀಗ ಹಾಕಿ ಪ್ರತಿಭಟನೆ

ಮದ್ದೂರು: ಕೇಂದ್ರ ಸರ್ಕಾರ ಕಬ್ಬಿಗೆ ದರ ನಿಗದಿ ಮಾಡುವವರೆಗೂ ಕಾರ್ಖಾನೆಯಿಂದ ಸಕ್ಕರೆಯನ್ನು ಬೇರೆ ರಾಜ್ಯಗಳಿಗೆ ಸರಬರಾಜು ಮಾಡಬಾರದೆಂದು ಆಗ್ರಹಿಸಿ ರಾಜ್ಯ ರೈತ ಸಂಘದಿಂದ ತಾಲೂಕಿನ ಕೊಪ್ಪ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಗೋದಾಮಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಸಂಘದ ಮುಖಂಡ ಗೊಲ್ಲರದೊಡ್ಡಿ ಅಶೋಕ್ ಮಾತನಾಡಿ, ಕಾರ್ಖಾನೆಯ ಅಡಳಿತ ಮಂಡಳಿ ಎಥೆನಾಲ್ ಅನ್ನು ಲೀಟರ್‌ಗೆ 60 ರೂ. ನಿಂದ 100 ರೂ. ಹೆಚ್ಚಿಸಬೇಕು ಹಾಗೂ ಕಮರ್ಷಿಯಲ್ ಸಕ್ಕರೆಯನ್ನು 30 ರೂ.ಯಿಂದ 100 ರೂ.ಗೆ ದರ ಏರಿಕೆ ಮಾಡಿ ಇದರಲ್ಲಿ ಬರುವ ಲಾಭದಲ್ಲಿ ಟನ್ ಕಬ್ಬಿಗೆ 5500 ರೂ. ನೀಡಬೇಕೆಂದು ಒತ್ತಾಯಿಸಿದರು.

ಕಾರ್ಖಾನೆಯ ಆಡಳಿತ ಮಂಡಳಿಗೆ ರೈತರಿಗೆ ಕೊಡಬೇಕಾಗಿರುವ ಕಬ್ಬಿನ ಬಾಕಿ ಹಣವನ್ನು ಶೀಘ್ರವಾಗಿ ರೈತರ ಬ್ಯಾಂಕ್‌ಗೆ ಖಾತೆಗೆ ಪಾವತಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಾರ್ಖಾನೆಯ ವಿರುದ್ಧ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಿನೋದ್‌ಬಾಬು, ಸ್ವಾಮಿ, ವೆಂಕಟಪ್ಪ, ಶಿವಕುಮಾರ್, ರಾಜಣ್ಣ, ರವಿ, ರಾಮಕೃಷ್ಣ, ಶಿವಲಿಂಗಯ್ಯ, ಪ್ರಸನ್ನ, ಕುಮಾರ, ಪ್ರಸನ್ನ, ಕುಮಾರ್, ಪುಟ್ಟಸ್ವಾಮಿ, ಅಪ್ಪಾಜಿ, ಶಶಿ, ಶಿವನಂಜೇಗೌಡ, ತಿಮ್ಮೇಶ, ಸುಬ್ಬಣ್ಣ, ಶಿವರಾಜು, ಸ್ವಾಮಿ, ಕೃಷ್ಣ ಇದ್ದರು.