ಮದ್ದೂರು: ಬ್ರಿಟಿಷರ ವಿರುದ್ಧ ಯಾವುದೇ ಅಸ್ತ್ರ ಬಳಸದೆ ಕೇವಲ ಸತ್ಯಾಗ್ರಹ ಮತ್ತು ಶಾಂತಿಯ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿ ಅವರ ಸತ್ಯ ಮತ್ತು ಅಹಿಂಸಾ ತತ್ವಗಳ ಮಾರ್ಗದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ನಡೆಯುವ ಮೂಲಕ ಸಮಾಜದಲ್ಲಿ ಶಾಂತಿಯುತ ಬದುಕು ನಡೆಸಬೇಕೆಂದು ತಹಸೀಲ್ದಾರ್ ಶಿವಕುಮಾರ್ ಬಿರಾದಾರ್ ಹೇಳಿದರು.
ನಗರದ ಶಿವಪುರದ ಧ್ವಜ ಸತ್ಯಾಗ್ರಹ ಸೌಧದಲ್ಲಿ ಶುಕ್ರವಾರ ಎಂ.ಎಚ್.ಚೆನ್ನೇಗೌಡ ವಿದ್ಯಾ ಸಂಸ್ಥೆಯ ಎಚ್.ಕೆ.ವೀರಣ್ಣಗೌಡ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಮದ್ದೂರಿನ ವಿವಿಧ ಸಮಾಜ ಸೇವಾ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಇಂದಿನ ಯುವಕರು ಸಮಾಜದಲ್ಲಿ ಯಾವ ಬದಲಾವಣೆಯನ್ನು ನೋಡ ಬಯಸುತ್ತೀರೋ ಆ ಬದಲಾವಣೆ ಮೊದಲು ನಿಮ್ಮಿಂದಲೇ ಪ್ರಾರಂಭವಾಗಲಿ ಎಂಬ ಗಾಂಧೀಜಿಯವರ ನುಡಿಯಂತೆ ವಿದ್ಯಾರ್ಥಿಗಳಾದ ನೀವು ಸತ್ಯ ,ಶಾಂತಿ, ಅಹಿಂಸಾ ಹಾಗೂ ಸ್ವಚ್ಛತೆಯ ಹಾದಿಯಲ್ಲಿ ನಡೆದು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕೆಂದು ಕಿವಿಮಾತು ಹೇಳಿದರು.
ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಸರಳತೆ, ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆ, ದಿಟ್ಟ ನಾಯಕತ್ವ ಮತ್ತು ದೇಶಪ್ರೇಮ ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದ ಅವರು, ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯ ಮೂಲಕ ದೇಶದ ಯೋಧ ಮತ್ತು ರೈತರಿಗೆ ಹೊಸ ಚೈತನ್ಯವನ್ನು ತಂದುಕೊಟ್ಟ ಲಾಲ್ ಬಹದ್ದೂರ್ ಶಾಸ್ತ್ರಿ ಅವವರನ್ನ ಗಾಂಧೀಜಿ ಅವರ ಹತೆ ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದರು.
ನಂತರ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಲಾಜಿ ಅರ್ಚಕರು ಶ್ರೀ ಉಗ್ರ ನರಸಿಂಹ ಸ್ವಾಮಿ ದೇವಾಲಯ, ಸೈಯದ್ ಅಹಮದ್ ಈದ್ಗಾ ಮಸೀದಿ ಗುರುಗಳು, ಹಾಗೂ ರೆವೆರೆಂಡ್ ಹ್ಯಾಂಡ್ರೋ ಜಾನ್ ಅವರು ಸರ್ವಗ್ರಂಥ ಪ್ರವಚನ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಎಂ.ಎಚ್.ಚನ್ನೇಗೌಡ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ.ಸ್ವರೂಪ ಚಂದ್, ಕಾರ್ಯದರ್ಶಿ ಸಿ.ಅಪೂರ್ವಚಂದ್ರ, ತಾಲೂಕಿನ ವಿವಿಧ ಸಂಘಟನೆಗಳ ಅಧ್ಯಕ್ಷರುಗಳಾದ ಡಿ.ಪಿ.ಸ್ವಾಮಿ, ಡಾ. ಬಿ.ಕೃಷ್ಣ, ಎಲ್.ಚಂದ್ರಶೇಖರ್, ವಿ.ಟಿ.ರವಿಕುಮಾರ್, ಕೆ.ಎಸ್.ಸುನಿಲ್‌ಕುಮಾರ್, ಎಂ.ಸಿ.ಸತೀಶ್, ನೈದಿಲೆ ಚಂದ್ರ, ರಾಮಕೃಷ್ಣ, ಚಾಮನಹಳ್ಳಿ ಮಂಜು, ಯು.ಎಸ್.ರವಿ, ಪ್ರಾಂಶುಪಾಲ ಯು.ಎಸ್.ಶಿವಕುಮಾರ್, ಡಾ.ಕಿರಣ್, ಮುಖ್ಯ ಶಿಕ್ಷಕರಾದ ಎನ್. ಕೃಷ್ಣ, ಎಂ.ಟಿ.ಚಂದ್ರಶೇಖರ್, ಎಚ್.ಬಿ.ಮಹೇಶ್, ವರದರಾಜು ಸೇರಿದಂತೆ ಇತರರು ಹಾಜರಿದ್ದರು.