ಪುಟ್ಟಣ್ಣಯ್ಯ ಫೌಂಡೇಷನ್ ಸಿಇಒ ಹಿರೇಮರಳಿ ರಣಜಿತ್ 
ಮಂಡ್ಯ

ಇಂದು, ನಾಳೆ ಪ್ರಕೃತಿ ಫ್ಲಸ್ ಮೇಳ

ಪುಟ್ಟಣ್ಣಯ್ಯ ಫೌಂಡೇಷನ್ ಸಿಇಒ ಹಿರೇಮರಳಿ ರಣಜಿತ್ ಮಾಹಿತಿ

ಪಾಂಡವಪುರ: ಪುಟ್ಟಣ್ಣಯ್ಯ ಫೌಂಡೇಷನ್, ವಿಲ್ಗ್ರೋ, ಸಿ.ಎಂ.ಎಸ್ ಸಂಸ್ಥೆಯ ಸಹಯೋಗದಲ್ಲಿ ಸೆ.30 ಮತ್ತು ಅ.1ರಂದು ಹವಾಮಾನ ಸ್ನೇಹಿ ಮತ್ತು ಹವಾಮಾನ ಹೊಂದಾಣಿಕೆಯ ಪರಿಹಾರಗಳ ಕುರಿತು ಪ್ರಕೃತಿ ಫ್ಲಸ್ ಮೇಳ ಆಯೋಜಿಸಲಾಗಿದೆ ಎಂದು ಫೌಂಡೇಷನ್ ಸಿಇಒ ಹಿರೇಮರಳಿ ರಣಜಿತ್ ತಿಳಿಸಿದರು.

ಸೆ.30ರಂದು ಚಿನಕುರಳಿ ಗ್ರಾಮದ ಪಂಚಾಯಿತಿ ಕಲಿಕಾ ಕೇಂದ್ರದಲ್ಲಿ ಹಾಗೂ ಅ. 1ರಂದು ಜಕ್ಕನಹಳ್ಳಿ ವೃತ್ತದ ನಾ.ಚ.ಭವನದಲ್ಲಿ ಮೇಳ ನಡೆಯಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಗ್ರಾಮೀಣ ಸಮುದಾಯಗಳಿಗೆ ಪ್ರಾಯೋಗಿಕ ಹವಾಮಾನ ಪರಿಹಾರಗಳು ಸುಲಭವಾಗಿ ಲಭ್ಯವಾಗುವಂತೆ ಮಾಡುವುದು, ಸ್ಥಳೀಯ ಸಂಸ್ಥೆಗಳು ಮತ್ತು ಸಮುದಾಯದ ಉದ್ಯಮಿಗಳು ಹವಾಮಾನ ಆರ್ಥಿಕತೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.

ರೈತ ಉತ್ಪಾದಕರ ಸಂಸ್ಥೆಗಳು, ಸ್ವಸಹಾಯ ಗುಂಪುಗಳು, ಸಮುದಾಯ ಆಧಾರಿತ ಸಂಸ್ಥೆಗಳು ಹಾಗೂ ಇತರ ಸ್ಥಳೀಯ ಸಂಸ್ಥೆಗಳೊಂದಿಗೆ ಕೈಜೋಡಿಸಿ, ಸೂಕ್ತಪರಿಹಾರಗಳ ಕುರಿತು ಅರಿವು ಮೂಡಿಸುವುದು, ಅವುಗಳಿಗೆ ಪ್ರವೇಶ ಕಲ್ಪಿಸುವುದು ಮತ್ತು ಬಳಕೆಯನ್ನು ಉತ್ತೇಜಿಸುವ ಕಾರ್ಯವನ್ನೂ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಮೇವಿನ ಘಟಕ, ಸೌರ ಬೆಳಕಿನ ಕೀಟ ಬಲೆಗಳು, ಸೋಲಾರ್ ಡ್ರೈಯರ್, ಪ್ಯಾಡಿ ವೀಡರ್ ಮತ್ತು ಕೋಳಿ ಫೌರ್ಮ್ ರೇಕಿಂಗ್ ಯಂತ್ರ, ಹಣ್ಣು ತರಕಾರಿ ಮತ್ತು ಹೂವಿನ ಕ್ರೇಟ್‌ಗಳು, ಸೋಲಾರ್ ಮನೆ ಬೆಳಕು ಮತ್ತು ಅಡುಗೆ ಉಪಕರಣಗಳ ಮಾರಾಟವಿರಲಿದೆ ಎಂದರು.

ಕ್ಯಾಟಲಿಸ್ಟ್ ಮ್ಯಾನೇಜ್‌ಮೆಂಟ್ ಸರ್ವೀಸ್‌ನ ಪಂಕಜ್ ಯಾದವ್, ವಿಶ್ವನಾಥ್, ಕ್ಷಿತಿಜ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.