ಕೊಪ್ಪ ಹೋಬಳಿಯ ಆಬಲವಾಡಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಮಂಗಳವಾರ ಅವಿರೋಧ ಆಯ್ಕೆಯಾದ ಜೆ.ತಿಮ್ಮೇಶ್ ಅವರನ್ನು ಗೌರವಿಸಲಾಯಿತು. ಸಿದ್ದರಾಜು, ತ್ಯಾಗರಾಜು, ಶಿವಲಿಂಗಯ್ಯ, ಚಿಕ್ಕತಾಯಮ್ಮ, ಟಿ.ತೋಯಜಾಕ್ಷ ಇದ್ದರು.  dairy
ಮಂಡ್ಯ

ಆಬಲವಾಡಿ ಡೇರಿಗೆ ಜೆ.ತಿಮ್ಮೇಶ್ ಅಧ್ಯಕ್ಷ

ಅವಿರೋಧ ಆಯ್ಕೆ

ಎಂಡಿಆರ್ : ಕೊಪ್ಪ ಹೋಬಳಿಯ ಆಬಲವಾಡಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಜೆ.ತಿಮ್ಮೇಶ್ ಅವಿರೋಧ ಆಯ್ಕೆಯಾಗಿದ್ದಾರೆ.

ಲಕ್ಷ್ಮಮ್ಮ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಸಂಘದ ಸಭಾಂಗಣದಲ್ಲಿ ಮಂಗಳವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಜೆ.ತಿಮ್ಮೇಶ್ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಇವರ ಆಯ್ಕೆಯನ್ನು ಚುನಾವಣಾಧಿಕಾರಿ ಘೋಷಣೆ ಮಾಡಿದರು. ನಂತರ ಮಾತನಾಡಿದ ಅಧ್ಯಕ್ಷ ಜೆ.ತಿಮ್ಮೇಶ್, ಹಾಲು ಉತ್ಪಾದಕರ ಹಾಗೂ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಸಂಘದ ಎಲ್ಲ ನಿರ್ದೇಶಕರ ವಿಶ್ವಾಸ ಪಡೆದು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವೆ ಎಂದರು. ಹೈನುಗಾರಿಕೆಯನ್ನು ಬಹುತೇಕ ಕೃಷಿಕರು ಅವಲಂಬಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಲು ಉತ್ಪಾದಕರಿಗೆ ಸಂಘದ ವತಿಯಿಂದ ಹಾಗೂ ಜಿಲ್ಲಾ ಹಾಲು ಒಕ್ಕೂಟದಿಂದ ದೊರಕಬಹುದಾದ ವಿವಿಧ ಸವಲತ್ತುಗಳನ್ನು ಸಮರ್ಪಕವಾಗಿ ದೊರಕಿಸಿಕೊಡಲು ಶ್ರಮಿಸುವೆ ಎಂದರು. ಸಂಘದ ಉಪಾಧ್ಯಕ್ಷ ಸಿದ್ದರಾಜು, ನಿರ್ದೇಶಕರಾದ ತ್ಯಾಗರಾಜು, ಶಿವಲಿಂಗಯ್ಯ, ಚಿಕ್ಕತಾಯಮ್ಮ, ಬಿಳಿಯಪ್ಪ, ತಾಪಂ ಮಾಜಿ ಸದಸ್ಯ ಟಿ.ತೋಯಜಾಕ್ಷ, ಗ್ರಾಪಂ ಮಾಜಿ ಉಪಾಧ್ಯಕ್ಷ ಆರ್.ತಿಮೇಶ್, ಮುಖಂಡರಾದ ರಾಮಕೃಷ್ಣ, ಜಯರಾಮು ಇತರರು ಹಾಜರಿದ್ದರು.