ನಂದಿಬಸಪ್ಪ  
ಮಂಡ್ಯ

ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ಸಾವು

ಸೆ.27ರಂದು ನಡೆದಿದ್ದ ಬೈಕ್-ಟ್ರಾೃಕ್ಟರ್ ನಡುವಿನ ಅಪಘಾತ

ಮಳವಳ್ಳಿ: ತಾಲೂಕಿನ ರಾವಣಿ ಸಮೀಪ ಸೆ.27ರಂದು ನಡೆದಿದ್ದ ಬೈಕ್-ಟ್ರಾೃಕ್ಟರ್ ನಡುವಿನ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಮೃತಪಟ್ಟಿದ್ದಾರೆ.

ತಾಲೂಕಿನ ವಾಸುವಳ್ಳಿ ಗ್ರಾಮದ ನಂದಿಬಸಪ್ಪ (54) ಮೃತರು. ಸೆ.27ರಂದು ರಾವಣಿ ಸಮೀಪ ಬೈಕ್ ಮತ್ತು ಟ್ರ್ಯಾಕ್ಟರ್ ನಡುವೆ ಡಿಕ್ಕಿ ಸಂಭವಿಸಿ ನಂದಿಬಸಪ್ಪ ಅವರಿಗೆ ತೀವ್ರ ಗಾಯಗಳಾಗಿದ್ದವು. ಕೂಡಲೇ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಮೃತರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಅಂತ್ಯಕ್ರಿಯೆ ಮಂಗಳವಾರ ಸ್ವಗ್ರಾಮ ವಾಸುವಳ್ಳಿ ಗ್ರಾಮದ ಮೃತರ ಜಮೀನಿನಲ್ಲಿ ನಡೆಯಿತು. ಈ ಸಂಬಂಧ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.