ಮದ್ದೂರು ತಾಲೂಕು ರಂಗಭೂಮಿ ಹಿರಿಯ ಕಲಾವಿದರ ಸಂಘದ ವತಿಯಿಂದ ಹಿರಿಯ ಕಲಾವಿದರಾದ ಕೃಷ್ಣೇಗೌಡ, ಚನ್ನಪ್ಪ, ತಮ್ಮಯ್ಯ ಅವರನ್ನು ಅಭಿನಂದಿಸಲಾಯಿತು. ಮಹದೇವು, ಕೆ.ನಾಗರಾಜು, ವೀರಭದ್ರಾಚಾರ್, ಡಿ.ಎಂ.ಸತ್ಯಾ, ಗೌರಿಶಂಕರ್, ಆನಂದಾಚಾರಿ, ಸ್ವಾಮಿ ಇತರರು ಇದ್ದರು. 
ಮಂಡ್ಯ

ಯುವಕರನ್ನು ರಂಗಭೂಮಿಯತ್ತ ಸೆಳೆಯಬೇಕಿದೆ

ಪ್ರಮುಖ ಮುಖ್ಯಾಂಶಗಳು

  • Young people

ಮದ್ದೂರು:

ರಂಗಭೂಮಿ ಕಲಾವಿದರು ನಾಟಕ, ಕಲೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳಸುವಲ್ಲಿ ಅನನ್ಯ ಕೊಡುಗೆ ನೀಡುತ್ತಿದ್ದಾರೆ ಎಂದು ತಾಲೂಕು ರಂಗಭೂಮಿ ಹಿರಿಯ ಕಲಾವಿದರ ಸಂಘದ ಅಧ್ಯಕ್ಷ ಮಹದೇವು ತಿಳಿಸಿದರು.

ನಗರದ ಶಿವಪುರದಲ್ಲಿರುವ ಸಂಘದ ಕಚೇರಿಯಲ್ಲಿ ತಾಲೂಕು ರಂಗಭೂಮಿ ಹಿರಿಯ ಕಲಾವಿದರ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸಂಘದ 5ನೇ ವಾರ್ಷಿಕೋತ್ಸವ ಹಾಗೂ ಹಿರಿಯ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕನ್ನಡ ರಂಗಭೂಮಿಗೆ ಮಾಸ್ಟರ್ ಹಿರಣ್ಣಯ್ಯ, ಏಣಗಿ ಬಾಳಪ್ಪ, ರಂಗಾಯಣ ರಘು ಹಾಗೂ ಉಮಾಶ್ರೀ ಸೇರಿದಂತೆ ಹಲವಾರು ಕಲಾವಿದರು ಅನುಮಪ ಸೇವೆ ಸಲ್ಲಿಸಿದ್ದಾರೆ. ತಾಲೂಕು ರಂಗಭೂಮಿ ಕಲಾವಿದರ ಸಂಘವು 5 ವರ್ಷಗಳಲ್ಲಿ ಹಲವಾರು ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳನ್ನು ಪ್ರದರ್ಶಿಸುವ ಮೂಲಕ ಸಾಕಷ್ಟು ಹೊಸ ಕಲಾವಿದರನ್ನು ಹುಟ್ಟು ಹಾಕಿದೆ. ಪ್ರಸ್ತುತ ದಿನಗಳಲ್ಲಿ ಯುವ ಜನತೆ ಮೊಬೈಲ್ ಹಾಗೂ ಕಂಪ್ಯೂಟರ್ ಪ್ರಭಾವಕ್ಕೆ ಒಳಗಾಗಿ ರಂಗಕಲೆಯನ್ನು ಮರೆಯುತ್ತಿರುವುದು ಬೇಸರದ ಸಂಗತಿ. ಇವರನ್ನು ಮತ್ತೆ ರಂಗಕಲೆಯತ್ತ ಸೆಳೆಯಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ ಕೃಷ್ಣೇಗೌಡ, ಚನ್ನಪ್ಪ, ತಮ್ಮಯ್ಯ ಅವರನ್ನು ಗೌರವಿಸಲಾಯಿತು.
ಉಪಾಧ್ಯಕ್ಷ ಕೆ.ನಾಗರಾಜು, ಪ್ರಧಾನ ಕಾರ್ಯದರ್ಶಿ ವೀರಭದ್ರಾಚಾರ್, ಸಹ ಕಾರ್ಯದರ್ಶಿ ಬಿ.ಎಂ.ಸತ್ಯ, ಸಂಘಟನಾ ಕಾರ್ಯದರ್ಶಿ ಗೌರಿಶಂಕರ್, ಖಜಾಂಚಿ ಬಿ.ಶಿವಣ್ಣ, ಪದಾಧಿಕಾರಿಗಳಾದ ಎಂ.ಎನ್.ನಾಗರಾಜು, ಅರುಣ, ನಂದೀಶ್, ತೈಲೂರು ಆನಂದಚಾರಿ, ಹುಣಸೆಮರದದೊಡ್ಡಿ ಸ್ವಾಮಿ, ರಘು ಆಚಾರ್, ಬಸವರಾಜು, ಶಿವಕುಮಾರ್, ಚಂದ್ರಮೋಹನ್, ಕಾನೂನು ಸಲಹೆಗಾರ ಎಂ.ಜೆ.ಚಿಕ್ಕಣ್ಣಗೌಡ ಸೇರಿದಂತೆ ಇತರರು ಇದ್ದರು.