ಶ್ರೀರಂಗಪಟ್ಟಣದಲ್ಲಿ ಡಿ.2ರಂದು ಕುಸ್ತಿ ಪಂದ್ಯಾವಳಿ ಆರಂಭವಾಗುವ ಹಿನ್ನೆಲೆಯಲ್ಲಿ ಆಂಜನೇಯಸ್ವಾಮಿ ಕುಸ್ತಿ ಬಳಗದ ಸಮಿತಿ ಸದಸ್ಯರು ಕುಸ್ತಿ ಅಖಾಡ ಸಿದ್ಧತೆ ಪರಿಶೀಲಿಸಿದರು. ಕುಸ್ತಿ ಬಳಗದ ಚಂದನ್, ಉಸ್ತಾದ್‌ಗಳಾದ ಪೈ.ಸುರೇಶ್, ಪೈ.ನಾಗಣ್ಣ, ಪೈ.ಉಮೇಶ್, ಪೈ.ಸತೀಶ್, ಪೈ.ಪಾತು ರವಿ ಸಮಿತಿ ಸದಸ್ಯ ಪಿ.ರಾಘು, ಸೂರಿ, ್ರಭಾಕರ, ಶಿವರಾಮು, ರಾಘು, ಚೇತನ್ ಇತರರು ಇದ್ದರು.  
ಮಂಡ್ಯ

ಶ್ರೀರಂಗನಾಥಸ್ವಾಮಿ ಮೈದಾನದಲ್ಲಿ ಕುಸ್ತಿ ಪಂದ್ಯ ಇಂದು

ಪ್ರಮುಖ ಮುಖ್ಯಾಂಶಗಳು

  • ಸಿದ್ಧತೆ ಪರಿಶೀಲಿಸಿದ ಮುಖಂಡರು, ಪೈಲ್ವಾನರು
  • ನಾಳೆ ಹನುಮ ಮಾಲಾಧಾರಿಗಳ ಬೃಹತ್ ಸಂಕೀರ್ತನಾ ಯಾತ್ರೆ
ಶ್ರೀರಂಗಪಟ್ಟಣ: ಡಿ.3ರಂದು ನಡೆಯುವ ಹನುಮ ಮಾಲಾಧಾರಿಗಳ ಬೃಹತ್ ಸಂಕೀರ್ತನಾ ಯಾತ್ರೆ ಪ್ರಯುಕ್ತ ಮೂಡಲು ಬಾಗಿಲು ಆಂಜನೇಯಸ್ವಾಮಿ ಕುಸ್ತಿ ಬಳಗದ ವತಿಯಿಂದ ಇದೇ ಮೊದಲ ಬಾರಿಗೆ ಮೈಸೂರು ವಿಭಾಗೀಯ ಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ. ಈ ಹಿನೆಲೆಯಲ್ಲಿ ಪಟ್ಟಣದ ಮುಖಂಡರು, ಪೈಲ್ವಾನರು ಸೋಮವಾರ ಕುಸ್ತಿ ಅಖಾಡದ ಸಿದ್ಧತೆ ಪರಿಶೀಲಿಸಿದರು.
ಪಟ್ಟಣದ ಶ್ರೀರಂಗನಾಥಸ್ವಾಮಿ ಮೈದಾನದಲ್ಲಿ ಡಿ.2ರಂದು ಪಂದ್ಯಾವಳಿಗೆ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಚಾಲನೆ ನೀಡಲಿದ್ದಾರೆ.
ಡಿ.2 ಮತ್ತು 3ರಂದು ಆಯೋಜಿಸಿರುವ ಪಂದ್ಯಾವಳಿಯಲ್ಲಿ ಮೊದಲ ದಿನ ಪಾಯಿಂಟ್ ಕುಸ್ತಿ ಮತ್ತು 2ನೇ ದಿನ ಮಟ್ಟಿ ಕುಸ್ತಿ ನಡೆಯಲಿದ್ದು, ರಾಜ್ಯ-ಹೊರ ರಾಜ್ಯಗಳಿಂದ ಸುಮಾರು 40ಕ್ಕೂ ಹೆಚ್ಚು ಕುಸ್ತಿ ಪೈಲ್ವಾನರು ಹಾಗೂ ರೆಫ್ರಿಯಾಗಿ 10 ಉಸ್ತಾದ್‌ಗಳು ಭಾಗಿಯಾಗುತ್ತಿದ್ದಾರೆ.
ಡಿ.3ರ ಬುಧವಾರ ಕೋಟೆ ಆಂಜನೇಯಸ್ವಾಮಿ ದೇವಾಲಯದಿಂದ ಮೂಡಲು ಬಾಗಿಲು ಆಂಜನೇಯಸ್ವಾಮಿ ದೇವಾಲಯದ ಮಾರ್ಗವಾಗಿ ಕ್ರೀಡಾಜ್ಯೋತಿ ತರುವ ಮೂಲಕ ಮಟ್ಟಿ ಕುಸ್ತಿಗೆ ಚಾಲನೆ ಸಿಗಲಿದೆ. ಕುಸ್ತಿ ಪಂದ್ಯಕ್ಕಾಗಿ ಶ್ರೀರಂಗನಾಥಸ್ವಾಮಿ ಮೈದಾನದಲ್ಲಿ ಈಗಾಗಲೇ 40*40 ಅಳತೆಯಲ್ಲಿ ಸುಸಜ್ಜಿತ ಕೆಮ್ಮಣ್ಣಿನ ಅಖಾಡವನ್ನು ಸಿದ್ದಪಡಿಸಲಾಗಿದ್ದು, ವಿದ್ಯುತ್ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆ. ಜತೆಗೆ ಗಣ್ಯರ ವೇದಿಕೆ ನಿರ್ಮಾಣ ಹಾಗೂ ಅಖಾಡದ ಸುತ್ತಲು ಕುಸ್ತಿ ಅಭಿಮಾನಿಗಳು ಕುಳಿತು ಪಂದ್ಯಾವಳಿ ವೀಕ್ಷಿಸಲು 2 ಸಾವಿರ ಆಸನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಮೂಡಲು ಬಾಗಿಲು ಆಂಜನೇಯಸ್ವಾಮಿ ಕುಸ್ತಿ ಬಳಗದ ಚಂದನ್, ಉಸ್ತಾದ್‌ಗಳಾದ ಪೈ.ಸುರೇಶ್, ಪೈ.ನಾಗಣ್ಣ, ಪೈ.ಉಮೇಶ್, ಪೈ.ಸತೀಶ್, ಪೈ.ಪಾತು ರವಿ ಸಮಿತಿ ಸದಸ್ಯ ಪಿ.ರಾಘು, ಸೂರಿ,ಪ್ರಭಾಕರ, ಶಿವರಾಮು, ರಾಘು, ಚೇತನ್ ಇತರರು ಇದ್ದರು.