ಶ್ರೀರಂಗಪಟ್ಟಣ ತಾಲೂಕಿನ ಕಿರಂಗೂರು ವೃತ್ತದ ಬನ್ನಿಮಂಟಪಕ್ಕೆ ಆಗಮಿಸಿದ ವೈರಮುಡಿ, ರಾಜಮುಡಿ ಕಿರೀಟ ಮತ್ತು ಒಡವೆಗಳುಳ್ಳ ಬುತ್ತಿಯನ್ನು ಎ.ಬಿ.ರಮೇಶ ಬಂಡಿಸಿದ್ದೇಗೌಡ ಎಡಿಸಿ ಬಿ.ಸಿ.ಶಿವಾನಂದಮೂರ್ತಿ ಅವರೊಂದಿಗೆ ತಲೆಯ ಮೇಲೆ ಹೊತ್ತು ಸಾಗಿದರು. 
ಮಂಡ್ಯ

ಕಿರಂಗೂರಿನ ಬನ್ನಿಮಂಟಪದಲ್ಲಿ ಪೂಜೆ ಸಲ್ಲಿಕೆ

ಶ್ರೀರಂಗಪಟ್ಟಣ : ವಿಶ್ವವಿಖ್ಯಾತ ಮೇಲುಕೋಟೆಯ ವೈರಮುಡಿ ಉತ್ಸವ ಪ್ರಯುಕ್ತ ಚೆಲುವ ನಾರಾಯಣಸ್ವಾಮಿಯ ವೈರಮುಡಿ ಹಾಗೂ ರಾಜಮುಡಿ ದೇವರ ಇತರೆ ಒಡವೆಗಳ ಬುತ್ತಿಗೆ ಕ್ಷೇತ್ರದ ಶಾಸಕರೂ ಆದ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ಪೂಜೆ ಸಲ್ಲಿಸಿದರು.
ಪಟ್ಟಣ ಸಮೀಪದ ಕಿರಂಗೂರಿನ ಬನ್ನಿಮಂಟಪಕ್ಕೆ ಶನಿವಾರ ಮುಂಜಾನೆ ಮಂಡ್ಯದ ಖಜಾನೆಯಿಂದ ವಿಶೇಷ ವಾಹನದಲ್ಲಿ ಪೊಲೀಸ್ ಭಿಗಿ ಭದ್ರತೆಯಲ್ಲಿ ತರಲಾದ ವೈರಮುಡಿ, ರಾಜಮುಡಿ ಬುತ್ತಿಯನ್ನು ಸಂಪ್ರದಾಯ ಪೂಜಾ-ವಿಧಿ ವಿಧಾನಗಳೊಂದಿಗೆ ಸ್ವಾಗತಿಸಲಾಯಿತು. 3ನೇ ಜಿಲ್ಲಾ ಅಪರ ಮತ್ತು ಸತ್ರ ನ್ಯಾಯಾಧೀಶರಾದ ಡಿ.ಜ್ಯೋತ್ಸ್ನಾ ಹಾಗೂ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ ಅವರೊಂದಿಗೆ ಬರಮಾಡಿಕೊಂಡ ಶಾಸಕರು, ಸ್ವಾಮಿಯ ಒಡವೆಗಳಿದ್ದ ಬುತ್ತಿಯನ್ನು ಎಡಿಸಿ ಶಿವಾನಂದಮೂರ್ತಿ ಅವರೊಂದಿಗೆ ತಲೆಯ ಮೇಲೆ ಹೊತ್ತು ನಡೆದು ಪಾಂಡವಪುರ ಕಡೆಗೆ ಬೀಳ್ಕೊಟ್ಟರು.
ಈ ವೇಳೆ ತಹಸೀಲ್ದಾರ್ ಚೇತನಾ ಯಾದವ್, ಶ್ರೀರಂಗಪಟ್ಟಣ ಟೌನ್ ಠಾಣೆ ಇನ್‌ಸ್ಪೆಕ್ಟರ್ ಬಿ.ಜಿ.ಕುಮಾರ್, ಮುಖಂಡರಾದ ಬಿ.ಎಸ್.ಸುಬ್ರಮಣ್ಯ, ಸಂದೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.