ಅಣೆಕಟ್ಟೆಗಳ ಸುರಕ್ಷತೆಗೆ ಕುರಿತು ಕರ್ನಾಟಕ ರಾಜ್ಯದ ಡ್ರಿಪ್-ಎಸ್‌ಪಿಎಂಯು ಮತ್ತು ಇಂಜಿನಿಯರಿಂಗ್ ಸಂಶೋಧನ ಕೇಂದ್ರ ಜಂಟಿ ಸಹಯೋಗದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರಕ್ಕೆ ಪುಣೆಯ ಸಿಡ್ಯುಪಿಆರ್‌ಎಸ್‌ನ ನಿವೃತ್ತ ವಿಜ್ಞಾನಿ ಪಿ.ಡಿ.ಕಮಲಶೇಖರನ್ ಮತ್ತು ಕೆಇಆರ್‌ಎಸ್‌ನ ನಿರ್ದೇಶಕ ಕೆ.ಜೆ ಮಹೇಶ್ ಚಾಲನೆ ನೀಡಿದರು. ಹನುಮಂತಪ್ಪ, ವಿಕ್ರಮ್ ಜಸ್ಟಿರೊಟಿಯ, ಸುಬ್ರೋತ, ಸ್ವಾಮಿ ಇತರರಿದ್ದರು.
ಕೆ.ಆರ್.ಸಾಗರ: ರಾಜ್ಯದಲ್ಲಿನ ಹಲವು ಅಣೆಕಟ್ಟೆಗಳ ಸುರಕ್ಷತೆ ಬಗ್ಗೆ ರಾಜ್ಯದ ವಿವಿಧ ಇಲಾಖೆಗಳ ಇಂಜಿನಿಯರ್‌ಗಳಿಗೆ ಎರಡು ದಿನದ ತರಬೇತಿ ಕಾಯಾಗಾರಕ್ಕೆ ಕೆ.ಆರ್.ಸಾಗರದ ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರದಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.
ಅಣೆಕಟ್ಟೆಗಳ ಸುರಕ್ಷತೆಗೆ ಕುರಿತು ಕರ್ನಾಟಕ ರಾಜ್ಯದ ಡ್ರಿಪ್-ಎಸ್‌ಪಿಎಂಯು ಮತ್ತು ಇಂಜಿನಿಯರಿಂಗ್ ಸಂಶೋಧನ ಕೇಂದ್ರ ಜಂಟಿ ಸಹಯೋಗದಲ್ಲಿ ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ‘ಅಣೆಕಟ್ಟೆ ಉಪಕರಣ ಸಿದ್ಧಾಂತ ಮತ್ತು ಪ್ರದರ್ಶನ’ ಶೀರ್ಷಿಕೆಯಡಿ ಆಯೋಜಿಸಿದ್ದ ಕಾರ್ಯಾಗಾರಕ್ಕೆ ಪುಣೆಯ ಸಿಡ್ಯುಪಿಆರ್‌ಎಸ್ ನ ನಿವೃತ್ತ ವಿಜ್ಞಾನಿ ಪಿ.ಡಿ.ಕಮಲಶೇಖರನ್ ಮತ್ತು ಕೆಇಆರ್‌ಎಸ್‌ನ ನಿರ್ದೇಶಕ ಕೆ.ಜೆ ಮಹೇಶ್ ಜಂಟಿಯಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆಇಆರ್‌ಎಸ್‌ನ ನಿರ್ದೇಶಕ ಕೆ.ಜೆ.ಮಹೇಶ್, ರಾಜ್ಯದ ಅಣೆಕಟ್ಟೆಗಳ ಸುರಕ್ಷತೆ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರ ಮತ್ತು ಕರ್ನಾಟಕ ರಾಜ್ಯದ ಡ್ರಿಪ್-ಎಸ್‌ಪಿಎಂಯು ಜಂಟಿಯಾಗಿ ರಾಜ್ಯ ಮಟ್ಟದ ತರಬೇತಿ ಕಾರ್ಯಾಗಾರ ಏರ್ಪಡಿಸಿದ್ದು, ಅಣೆಕಟ್ಟೆಗೆ ಸುರಕ್ಷತೆ ಮತ್ತು ಆಭಿವೃದ್ಧಿಗೆ ಆಧುನಿಕ ತಂತ್ರಜ್ಞಾನ ಉಪಕರಣ ಮತ್ತು ಸಿದ್ಧಾಂತ ಬಳಕೆ ಬಗ್ಗೆ, ನಮ್ಮ ದೇಶದಲ್ಲಿನ ವಿವಿಧ ನುರಿತು ವಿಜ್ಞಾನಿಗಳು ಪ್ರಾತ್ಯಕ್ಷ್ಷಿಕೆ ಮೂಲಕ ಕಾರ್ಯಾಗಾರದ ತರಬೇತಿ ನೀಡಲಿದ್ದಾರೆ. ಈ ತರಬೇತಿಯಲ್ಲಿ ರಾಜ್ಯದ ಹಲವು ಇಲಾಖೆಗಳ ಇಂಜಿನಿಯರ್‌ಗಳು ಭಾಗವಹಿಸಿದ್ದಾರೆ ಎಂದರು.
ಈ ತರಬೇತಿ ಕಾರ್ಯಾಗಾರದಲ್ಲಿ ವಿಜ್ಞಾನಿಗಳಾದ ಪುಣೆಯ ಸಿಡ್ಯುಪಿಆರ್‌ಎಸ್ ವಿಜ್ಞಾನಿ ಹನುಮಂತಪ್ಪ, ತಂತ್ರಜ್ಞಾನಿಗಳಾದ ವಿಕ್ರಮ್ ಜಸ್ಟಿರೊಟಿಯ, ಸುಬ್ರೋತ, ಹಿರಿಯ ಇಂಜಿನಿಯರ್ ಸ್ವಾಮಿ, ಲಕ್ನೋದ ತಂತ್ರಜ್ಞಾನಿ ವಿನೋದಾ, ಇಂಜಿನಿಯರ್ ಗೌರವ್ ಶರ್ಮ, ತರಬೇತಿ ಕೇಂದ್ರದ ಪ್ರಭಾರ ಪ್ರಾಂಶುಪಾಲ ಗಿರೀಶ್, ಸಹಾಯಕ ಕಾರ್ಯಪಾಲಕ ಅಭಿಯಂತರರು ಇದ್ದರು.