ಅಣೆಕಟ್ಟೆಗಳ ಸುರಕ್ಷತೆಗೆ ಕುರಿತು ಕರ್ನಾಟಕ ರಾಜ್ಯದ ಡ್ರಿಪ್-ಎಸ್‌ಪಿಎಂಯು ಮತ್ತು ಇಂಜಿನಿಯರಿಂಗ್ ಸಂಶೋಧನ ಕೇಂದ್ರ ಜಂಟಿ ಸಹಯೋಗದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರಕ್ಕೆ ಪುಣೆಯ ಸಿಡ್ಯುಪಿಆರ್‌ಎಸ್‌ನ ನಿವೃತ್ತ ವಿಜ್ಞಾನಿ ಪಿ.ಡಿ.ಕಮಲಶೇಖರನ್ ಮತ್ತು ಕೆಇಆರ್‌ಎಸ್‌ನ ನಿರ್ದೇಶಕ ಕೆ.ಜೆ ಮಹೇಶ್ ಚಾಲನೆ ನೀಡಿದರು. ಹನುಮಂತಪ್ಪ, ವಿಕ್ರಮ್ ಜಸ್ಟಿರೊಟಿಯ, ಸುಬ್ರೋತ, ಸ್ವಾಮಿ ಇತರರಿದ್ದರು. 
ಮಂಡ್ಯ

ಅಣೆಕಟ್ಟೆಗಳ ಸುರಕ್ಷತೆ ಕುರಿತ ಕಾರ್ಯಾಗಾರ

ಕಿರಣ್ ಗೌಡ.ಜಿ

ಪ್ರಮುಖ ಮುಖ್ಯಾಂಶಗಳು

  • ರಾಜ್ಯದ ವಿವಿಧ ಇಲಾಖೆಗಳ ಇಂಜಿನಿಯರ್‌ಗಳು ಭಾಗಿ
ಕೆ.ಆರ್.ಸಾಗರ: ರಾಜ್ಯದಲ್ಲಿನ ಹಲವು ಅಣೆಕಟ್ಟೆಗಳ ಸುರಕ್ಷತೆ ಬಗ್ಗೆ ರಾಜ್ಯದ ವಿವಿಧ ಇಲಾಖೆಗಳ ಇಂಜಿನಿಯರ್‌ಗಳಿಗೆ ಎರಡು ದಿನದ ತರಬೇತಿ ಕಾಯಾಗಾರಕ್ಕೆ ಕೆ.ಆರ್.ಸಾಗರದ ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರದಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.
ಅಣೆಕಟ್ಟೆಗಳ ಸುರಕ್ಷತೆಗೆ ಕುರಿತು ಕರ್ನಾಟಕ ರಾಜ್ಯದ ಡ್ರಿಪ್-ಎಸ್‌ಪಿಎಂಯು ಮತ್ತು ಇಂಜಿನಿಯರಿಂಗ್ ಸಂಶೋಧನ ಕೇಂದ್ರ ಜಂಟಿ ಸಹಯೋಗದಲ್ಲಿ ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ‘ಅಣೆಕಟ್ಟೆ ಉಪಕರಣ ಸಿದ್ಧಾಂತ ಮತ್ತು ಪ್ರದರ್ಶನ’ ಶೀರ್ಷಿಕೆಯಡಿ ಆಯೋಜಿಸಿದ್ದ ಕಾರ್ಯಾಗಾರಕ್ಕೆ ಪುಣೆಯ ಸಿಡ್ಯುಪಿಆರ್‌ಎಸ್ ನ ನಿವೃತ್ತ ವಿಜ್ಞಾನಿ ಪಿ.ಡಿ.ಕಮಲಶೇಖರನ್ ಮತ್ತು ಕೆಇಆರ್‌ಎಸ್‌ನ ನಿರ್ದೇಶಕ ಕೆ.ಜೆ ಮಹೇಶ್ ಜಂಟಿಯಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆಇಆರ್‌ಎಸ್‌ನ ನಿರ್ದೇಶಕ ಕೆ.ಜೆ.ಮಹೇಶ್, ರಾಜ್ಯದ ಅಣೆಕಟ್ಟೆಗಳ ಸುರಕ್ಷತೆ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರ ಮತ್ತು ಕರ್ನಾಟಕ ರಾಜ್ಯದ ಡ್ರಿಪ್-ಎಸ್‌ಪಿಎಂಯು ಜಂಟಿಯಾಗಿ ರಾಜ್ಯ ಮಟ್ಟದ ತರಬೇತಿ ಕಾರ್ಯಾಗಾರ ಏರ್ಪಡಿಸಿದ್ದು, ಅಣೆಕಟ್ಟೆಗೆ ಸುರಕ್ಷತೆ ಮತ್ತು ಆಭಿವೃದ್ಧಿಗೆ ಆಧುನಿಕ ತಂತ್ರಜ್ಞಾನ ಉಪಕರಣ ಮತ್ತು ಸಿದ್ಧಾಂತ ಬಳಕೆ ಬಗ್ಗೆ, ನಮ್ಮ ದೇಶದಲ್ಲಿನ ವಿವಿಧ ನುರಿತು ವಿಜ್ಞಾನಿಗಳು ಪ್ರಾತ್ಯಕ್ಷ್ಷಿಕೆ ಮೂಲಕ ಕಾರ್ಯಾಗಾರದ ತರಬೇತಿ ನೀಡಲಿದ್ದಾರೆ. ಈ ತರಬೇತಿಯಲ್ಲಿ ರಾಜ್ಯದ ಹಲವು ಇಲಾಖೆಗಳ ಇಂಜಿನಿಯರ್‌ಗಳು ಭಾಗವಹಿಸಿದ್ದಾರೆ ಎಂದರು.
ಈ ತರಬೇತಿ ಕಾರ್ಯಾಗಾರದಲ್ಲಿ ವಿಜ್ಞಾನಿಗಳಾದ ಪುಣೆಯ ಸಿಡ್ಯುಪಿಆರ್‌ಎಸ್ ವಿಜ್ಞಾನಿ ಹನುಮಂತಪ್ಪ, ತಂತ್ರಜ್ಞಾನಿಗಳಾದ ವಿಕ್ರಮ್ ಜಸ್ಟಿರೊಟಿಯ, ಸುಬ್ರೋತ, ಹಿರಿಯ ಇಂಜಿನಿಯರ್ ಸ್ವಾಮಿ, ಲಕ್ನೋದ ತಂತ್ರಜ್ಞಾನಿ ವಿನೋದಾ, ಇಂಜಿನಿಯರ್ ಗೌರವ್ ಶರ್ಮ, ತರಬೇತಿ ಕೇಂದ್ರದ ಪ್ರಭಾರ ಪ್ರಾಂಶುಪಾಲ ಗಿರೀಶ್, ಸಹಾಯಕ ಕಾರ್ಯಪಾಲಕ ಅಭಿಯಂತರರು ಇದ್ದರು.