ಹಲಗೂರಿನ ವಿವಿಧ ರಸ್ತೆ ಕಾಮಗಾರಿಗಳಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಭೂಮಿಪೂಜೆ ನೆರವೇರಿಸಿದರು. ಶಿವಮ್ಮ, ನಟೇಶ್, ಸೋಮಶೇಖರ್, ಕುಂತೂರು ಗೋಪಾಲ್ ಇತರರು ಇದ್ದರು.
ಹಲಗೂರು: ಸಮೀಪದ ನಿಟ್ಟೂರು ಹಲಸಹಳ್ಳಿ, ನಿ.ಹೊಸದೊಡ್ಡಿ, ಧನಗೂರು, ಹುಲ್ಲಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಅಂದಾಜು 3.15 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಶನಿವಾರ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಬೆನಮನಹಳ್ಳಿ- ಕುಂತೂರು- ನಿಟ್ಟೂರು ಮಾರ್ಗವಾಗಿ ಸೇರುವ 4 ಕಿ.ಮೀ.ನಿಂದ 5.50 ಕಿ.ಮೀ ರಸ್ತೆ ಅಭಿವೃದ್ಧಿಗೆ 1.70 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಅಲ್ಲದೆ, ಇದೇ ಮಾರ್ಗದ 3 ಕಿ.ಮೀ ರಿಂದ 4 ಕಿ.ಮೀ ರಸ್ತೆ ಅಭಿವೃದ್ಧಿಗೆ 1 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಧನಗೂರು ಕೋಡಿಯಿಂದ ಧನಗೂರು ಕುರಿ ಫಾರ್ಮ್‌ವರೆಗೆ ರಸ್ತೆ ಅಭಿವೃದ್ಧಿಗೆ 15 ಲಕ್ಷ ರೂ., ಧನಗೂರು ಗ್ರಾಮದ ಪ.ಜಾ ಕಾಲನಿಯಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಅಂದಾಜು 10 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಇದೇ ರೀತಿ ಹುಲ್ಲಹಳ್ಳಿ ಹಾಗೂ ಕೋಡಿಪುರ ಗ್ರಾಮಗಳ ಜಮೀನುಗಳಿಗೆ ಅಡ್ಡ ರಸ್ತೆಯಿಂದ ಚನ್ನಿಪುರ ಮೈನರ್ ಚಾನಲ್ ರಸ್ತೆವರೆಗೆ ಮೆಟ್ಲಿಂಗ್ ಜಲ್ಲಿ ರಸ್ತೆ ವಿಸ್ತರಣೆ ಕಾಮಗಾರಿಗೆ 20 ಲಕ್ಷ ರೂ. ವೆಚ್ಚದಲ್ಲಿ ಕಾರ್ಯಾರಂಭವಾಗಿದೆ. ಒಟ್ಟಾರೆ 3.15 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ಮಳವಳ್ಳಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಚಿಕ್ಕಸಿದ್ದಯ್ಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಟೇಶ್, ಲೋಕೋಪಯೋಗಿ ಇಲಾಖೆಯ ಎಇಇ ಸೋಮಶೇಖರ್, ಕುಂತೂರು ಗೋಪಾಲ್, ಪದ್ಮನಾಬ್, ಶ್ರೀನಿವಾಸಾಚಾರಿ, ಮರಿಸ್ವಾಮಿ, ಶಿವಣ್ಣ ಎಚ್.ಎಸ್., ತಿಮ್ಮರಾಜು, ಸರ್ವೋತ್ತಮ್, ವೆಂಕಟರಾಮು, ಶಿವನಂಜು, ಸರಗೂರು ಜಯಣ್ಣ, ನಾಗರಾಜು, ಚಂದ್ರಕುಮಾರ್, ಶಿವಣ್ಣ, ದಿವ್ಯಕುಮಾರ್, ಜಮೀಲ್, ಸದ್ರುಲ್, ಜೀವನ್ ಕುಮಾರ್, ಭೀಮರಾಜು, ಗುತ್ತಿಗೆದಾರ ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು.