ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು 
ಮಂಡ್ಯ

ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

ಶಿವಶಂಕರ್ ಎಂ. ಹೆಬ್ಬಳ್ಳ
ಮದ್ದೂರು: ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಕಾರ್ಮಿಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ತಮಿಳುನಾಡು ಮೂಲದ ಕವಚ್(30) ಮೃತ ಕಾರ್ಮಿಕ. ನಗರದ ಟೀಚರ್ಸ್ ಕಾಲನಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ.ದೇವರಾಜ ಅರಸು ಹಾಸ್ಟೆಲ್ ನ ಕಟ್ಟಡ ಕಾಮಗಾರಿ ನಿರ್ಮಾಣವಾಗುತ್ತಿದ್ದು, ಶನಿವಾರ ಕಟ್ಟಡ ಕಾಮಗಾರಿಯ ಸೆಂಟ್ರಿಂಗ್ ಕೆಲಸ ಮಾಡಲು ಬಂದ ವೇಳೆ ಕಟ್ಟಡದಿಂದ ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.