ವಿದ್ಯುತ್ ತಂತಿ ತಗುಲಿ ಕಾರ್ಮಿಕ ಸ್ಥಳದಲ್ಲೇ ಮೃತ 
ಮಂಡ್ಯ

ವಿದ್ಯುತ್ ತಂತಿ ತಗುಲಿ ಕಾರ್ಮಿಕ ಮೃತ

ಅಭಿನಯ್ ಎಚ್.ಎಂ

ಪ್ರಮುಖ ಮುಖ್ಯಾಂಶಗಳು

  • ಕಲ್ಕುಣಿ ಸಮೀಪ
  • ವಿದ್ಯುತ್ ಕಂಬದ ದುರಸ್ತಿ ಕಾಮಗಾರಿ
ಮಳವಳ್ಳಿ: ತಾಲೂಕಿನ ಕಲ್ಕುಣಿ ಸಮೀಪ ವಿದ್ಯುತ್ ಕಂಬದ ದುರಸ್ತಿ ಕಾಮಗಾರಿಯಲ್ಲಿ ತೊಡಗಿದ್ದ ವೇಳೆ ವಿದ್ಯುತ್ ತಂತಿ ತಗುಲಿ ಕಾರ್ಮಿಕ ಗುರುವಾರ ಸ್ಥಳದಲ್ಲೇ ಮೃತಪಟ್ಟ್ಪಿದ್ದಾನೆ.
ಎಚ್.ಡಿ.ಕೋಟೆ ತಾಲೂಕಿನ ಐರಿಜಿ ಗ್ರಾಮದ ನಂದೀಶ (25) ಮೃತ ಕಾರ್ಮಿಕ. ಸೆಸ್ಕ್ ಮಾದರಿ ಗ್ರಾಮ ಯೋಜನೆಯಡಿ ಕಲ್ಕುಣಿ ಬಳಿಯ ಚಿಕ್ಕಕಲ್ಕುಣಿ ರಸ್ತೆಯಲ್ಲಿ ಗುತ್ತಿಗೆದಾರರ ಮೂಲಕ ಹಳೇ ವಿದ್ಯುತ್ ವೈರ್‌ಗಳ ಬದಲಾವಣೆ ಕಾಮಗಾರಿ ನಡೆಸಲಾಗುತ್ತಿತ್ತು. ಇದೇ ಕಂಬದಲ್ಲಿ ಹಾದು ಹೋಗಿದ್ದ ಮತ್ತೊಂದು ಲೈನ್ ವಿದ್ಯುತ್ ತಂತಿಗೆ ಅಚಾನಕ್ಕಾಗಿ ಕಾರ್ಮಿಕನ ಕೈಗೆ ತಗುಲಿ ವಿದ್ಯುತ್ ಪ್ರವಹಿಸಿದ್ದರಿಂದ ಕಾರ್ಮಿಕ ಕಂಬದಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಪಟ್ಟಣದ ಶವಾಗಾರಕ್ಕೆ ಮೃತದೇಹವನ್ನು ಸ್ಥಳಾಂತರಿಸಲಾಗಿತ್ತಾದರೂ, ಗುತ್ತಿಗೆದಾರ ಹಾಗೂ ಮೃತ ಕಾರ್ಮಿಕ ಕುಟುಂಬದ ಸದಸ್ಯರ ನಡುವೆ ಸಂಧಾನ ಮಾತುಕತೆ ನಡೆಯಿತು. ಈ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ .