ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯ ಯಡವನಹಳ್ಳಿ ಗ್ರಾಮದಲ್ಲಿ ಶ್ರೀ ಕಸ್ತೂರಿ ಕನ್ನಡ ಗೆಳೆಯರ ಬಳಗವನ್ನು ಸಾಹಿತಿ ಕ್ರಾಂತಿಸಿಂಹ ಉದ್ಘಾಟಿಸಿದರು. ಮಹೇಶ್, ಎಂ.ಸಂತೋಷ್, ಗಿರೀಶ್, ಹುಚ್ಚಪ್ಪ, ಪ್ರಕಾಶ್, ಚೇತನ್, ಶಿವರಾಜು ಇದ್ದರು.  
ಮಂಡ್ಯ

ನಾಡು, ನುಡಿ, ನೆಲ, ಜಲ ಅಭಿವೃದ್ಧಿಗೆ ದುಡಿಯಿರಿ

ಮದ್ದೂರು: ಯುವಜನರು ನಾಡು-ನುಡಿ, ನೆಲ-ಜಲ ಹಾಗೂ ಗ್ರಾಮಗಳ ಅಭಿವೃದ್ಧಿಗೆ ಕಂಕಣಬದ್ಧರಾಗಿ ದುಡಿಯುವ ಮೂಲಕ ಮಾತೃಭೂಮಿಯ ಋಣದಿಂದ ಮುಕ್ತರಾಗಬೇಕಿದೆ ಎಂದು ಸಾಹಿತಿ ಸಿ.ಎಂ. ಕ್ರಾಂತಿಸಿಂಹ ಯಡವನಹಳ್ಳಿ ತಿಳಿಸಿದರು.
ತಾಲೂಕಿನ ಕೊಪ್ಪ ಹೋಬಳಿಯ ಯಡವನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಶ್ರೀ ಕಸ್ತೂರಿ ಕನ್ನಡ ಗೆಳೆಯರ ಬಳಗ ಉದ್ಘಾಟಿಸಿ ಮಾತನಾಡಿ, ನಮ್ಮ ಭಾಷೆಯನ್ನು ನಿತ್ಯ ಮಾತನಾಡುತ್ತ ಭಾಷಾಭಿಮಾನಿಗಳಾಗಬೇಕು, ಜಿಲ್ಲೆ ವಿಶ್ವದಲ್ಲಿಯೇ ಅತಿ ಹೆಚ್ಚು ಕನ್ನಡ ಮಾತನಾಡುವ ಜನರಿರುವ ಜಿಲ್ಲೆ ಎಂಬ ಕೀರ್ತಿಗೆ ಭಾಜನವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡ ಭಾಷೆ ವಿಶ್ವ ಭಾಷೆಯಾಗಿ ಬೆಳೆದು ಬೆಳಗಲಿ, ಪ್ರಪಂಚದದ್ಯಾಂತ ನಮ್ಮ ಭಾಷೆ ಬೆಳೆಸಲು ದುಡಿಯಬೇಕಿದೆ. ಕದಂಬರು, ಗಂಗರು, ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರ ಅರಸರು, ಯಲಹಂಕ ನಾಡಪ್ರಭುಗಳು, ಮೈಸೂರು ಒಡೆಯರು ಇನ್ನು ಹಲವರು ಕರುನಾಡನ್ನು ಆಳಿ ಕನ್ನಡ ಭಾಷೆಯ ಬೆಳವಣಿಗೆಗೆ ಪ್ರೋತ್ಸಾಹ ನೀಡಿದ್ದಾರೆ ಎಂದರು.
ರನ್ನ, ಪೊನ್ನ, ಜನ್ನ, ಸರ್ವಜ್ಞ, ಬಿಎಂಶ್ರೀ, ಪುತಿನಾ, ಕುವೆಂಪು, ದ.ರಾ. ಬೇಂದ್ರೆ ತರಾಸು ಮುಂತಾದ ಮಹನೀಯರು ಕನ್ನಡ ಭಾಷೆಯ ಅಭ್ಯುದಯಕ್ಕಾಗಿ ದುಡಿದಿದ್ದಾರೆ. ನಾವು ನಮ್ಮ ಕಾಲಘಟ್ಟದಲ್ಲಿ ಕನ್ನಡದ ಬೆಳವಣಿಗೆಗೆ ಶ್ರಮಿಸೋಣ ಎಂದರು.
ಬಳಗದ ಅಧ್ಯಕ್ಷ ಮಹೇಶ್, ಗೌರವಾಧ್ಯಕ್ಷ ಎಂ.ಸಂತೋಷ್, ಉಪಾಧ್ಯಕ್ಷ ಗಿರೀಶ್ ಕಾರ್ಯದರ್ಶಿ ಹುಚ್ಚಪ್ಪ, ಖಜಾಂಚಿ ಪ್ರಕಾಶ್, ಪದಾಧಿಕಾರಿಗಳಾದ ಚೇತನ್, ಶಿವರಾಜು, ಮಂಜು ಮಂಗಪ್ಪ, ಮುಖಂಡರಾದ ಮಂಚಯ್ಯ, ಡಿ.ಮಹೇಂದ್ರ, ರಾಮಲಿಂಗಯ್ಯ, ನಿಧಿಯಪ್ಪ ಇದ್ದರು.