ಕೃಷ್ಣರಾಜಸಾಗರದ ಅರಳಿಕಟ್ಟೆ ಬಳಿಯ ಅಫಿಷಿಯಲ್ ಕಾಲನಿಯಲ್ಲಿ ಟೈಲರಿಂಗ್ ತರಬೇತಿ ಕೇಂದ್ರವನ್ನು ಮಮ್ತಾಜ್ ಉದ್ಘಾಟಿಸಿದರು. 
ಮಂಡ್ಯ

ಎಲ್ಲ ಕೆಲಸಗಳಲ್ಲೂ ಸಾಮರ್ಥ್ಯ ತೋರುತ್ತಿರುವ ಮಹಿಳೆಯರು

ಪ್ರಮುಖ ಮುಖ್ಯಾಂಶಗಳು

  • ಕೆ.ಆರ್.ಸಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಂತಿ ಮೆಚ್ಚುಗೆ
ಕೆ.ಆರ್.ಸಾಗರ: ಇಲ್ಲಿನ ಅರಳಿಕಟ್ಟೆ ಬಳಿಯ ಅಫಿಷಿಯಲ್ ಕಾಲನಿಯಲ್ಲಿ ಮಹಿಳೆಯರಿಗಾಗಿ ಹೊಸದಾಗಿ ಪ್ರಾರಂಭವಾದ ಮಮ್ತಾಜ್ ಟೈಲರಿಂಗ್ ತರಬೇತಿ ಕೇಂದ್ರವನ್ನು ಕೆ.ಆರ್.ಸಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಂತಿ ಉದ್ಘಾಟಿಸಿದರು.
ಪುರಷರಿಗಿಂತ ಮಹಿಳೆಯರು ಯಾವುದರಲ್ಲೂ ಕಡಿಮೆ ಇಲ್ಲದಂತೆ ಎಲ್ಲ ಕೆಲಸಗಳಲ್ಲೂ ತಮ್ಮ ಸಾಮರ್ಥ್ಯ ತೋರುತ್ತಿದ್ದಾರೆ. ಅದರಲ್ಲೂ ಗಾರ್ಮೆಂಟ್ಸ್ ಉದ್ಯೋಗಾವಕಾಶ ವಿಫುಲವಾಗಿದ್ದು ಇದರಲ್ಲಿ ಮಹಿಳೆಯರ ಪಾತ್ರ ದೊಡ್ಡದು. ಇದಕ್ಕೆ ಟೈಲರಿಂಗ್ ತರಬೇತಿ ಅತ್ಯವಶ್ಯಕವಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಇಂತಹ ಆಧುನಿಕ ಯಂತ್ರಗಳ ಮೂಲಕ ತರಬೇತಿ ಕೇಂದ್ರ ನೀಡುತ್ತಿರುವುದು ಸಂತಸದ ವಿಷಯ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ನಾಗೇಂದ್ರ ಕುಮಾರ್ ಮಾತನಾಡಿ, ಇಂದಿನ ದಿನಗಳಲ್ಲಿ ಮಹಿಳೆಯರು ಗಾರ್ಮೆಂಟ್ಸ್ ವಿಭಾಗದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದರಿಂದ ಕುಟುಂಬಕ್ಕೆ ದಾರಿಯಾದಂತಾಗಿದೆ. ಕಲಿಕೆ ಶ್ರದ್ಧೆಯಿಂದ ಕೂಡಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಕೆ.ಆರ್.ಸಾಗರ ಗ್ರಾ.ಪಂ ಉಪಾಧ್ಯಕ್ಷ ಪಾಪಣ್ಣ, ಸದಸ್ಯರಾದ ನಾಗೇಂದ್ರಕುಮಾರ್, ನರಸಿಂಹ, ಮೂರ್ತಿ, ರವಿಕುಮಾರ್, ದೇವರಾಜು, ಮುಖಂಡರಾದ ಗೋಪಾಲ್, ಪ್ರಮೋದ್, ಸಂಜೀವಿನಿ, ಅಕ್ಕಮಹಾದೇವಿ ಗ್ರಾಮ ಪಂಚಾಯಿತಿ ಸ್ವ ಸಹಾಯ ಸಂಘದ ಅಧ್ಯಕ್ಷೆ ಸುಜಾತಾ, ಕಾರ್ಯದರ್ಶಿ ಮಹಾಲಕ್ಷ್ಮೀ, ಟೈಲರಿಂಗ್ ತರಬೇತಿ ಶಾಲೆಯ ಮುಖ್ಯಸ್ಥೆ ಮಮ್ತಾಜ್ ಇತರರು ಇದ್ದರು.