crime  
ಮಂಡ್ಯ

ಮಹಿಳೆಯ ಮಾಂಗಲ್ಯ ಸರ ಅಪಹರಣ

ಪ್ರಜ್ವಲ್.ಎನ್
ಕಿಕ್ಕೇರಿ: ಹೋಬಳಿಯ ಗೂಬೆಗುಡ್ಡ ಕ್ರಾಸ್ ಬಳಿ ಚಲಿಸುತ್ತಿದ್ದ ಬೈಕ್‌ನಲ್ಲಿದ್ದ ಮಹಿಳೆಯ ಮಾಂಗಲ್ಯ ಸರವನ್ನು ದುಷ್ಕರ್ಮಿ ಅಪಹರಿಸಿದ್ದಾರೆ.
ಕೋಡಿಮಾರನಹಳ್ಳಿಯ ಹರೀಶ್ ಅವರ ಪತ್ನಿ ವಿನಿತಾ ತನ್ನ ಮಾವ ಪುಟ್ಟರಾಜು ಜತೆ ಬೈಕ್‌ನಲ್ಲಿ ಶುಕ್ರವಾರ ಹಲಸನಹಳ್ಳಿಗೆ ತೆರಳುತ್ತಿದ್ದರು. ಈ ವೇಳೆಯಲ್ಲಿ ಹರಿಯಾಲದಮ್ಮ ಗುಡಿ ಮಾರ್ಗದಿಂದ ಬಂದ ಬೈಕ್ ಸವಾರ ವಿನಿತಾ ಅವರ ಕತ್ತಿಗೆ ಕೈಹಾಕಿ ಮಾಂಗಲ್ಯ ಸರ ಕಸಿದಿದ್ದಾನೆ. ಸರವನ್ನು ಜೋಪಾನ ಮಾಡಿಕೊಳ್ಳಲು ಹೋಗಿ ವಿಮಿತಾ ಬೈಕ್‌ನಿಂದ ಬಿದ್ದು, ಸಣ್ಣಪುಟ್ಟ ಗಾಯವಾಗಿದೆ.
ವಿಷಯ ತಿಳಿದು ಸ್ಥಳದಲ್ಲಿದ್ದ ಸಾರ್ವಜನಿಕರು ಸರ ಕದ್ದ ಬೈಕ್ ಸವಾರನ ಸುಳಿವಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ, ಸವಾರ ನಾಪತ್ತೆಯಾಗಿದ್ದಾನೆ. ದುಷ್ಕರ್ಮಿಯ ಬೈಕ್‌ಗೆ ಯಾವುದೇ ನಂಬರ್ ಪ್ಲೇಟ್ ಇಲ್ಲದಿರುವುದು ಕಂಡು ಬಂದಿದೆ.
ಸುಮಾರು 30ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ದುಷ್ಕರ್ಮಿಗಳು ಕಿತ್ತುಕೊಂಡು ಹೋಗಿರುವುದಾಗಿ ಕಿಕ್ಕೇರಿ ಪೊಲೀಸರಿಗೆ ದೂರು ನೀಡಲಾಗಿದೆ.
ಪ್ರಕರಣವನ್ನು ಕಿಕ್ಕೇರಿ ಇನ್‌ಸ್ಪೆಕ್ಟರ್ ಎಸ್.ಎನ್. ಜಯರಾಂ ದಾಖಲಿಸಿಕೊಂಡು ಆರೋಪಿ ಪತ್ತೆಗೆ ತಂಡ ರಚಿಸಿಕೊಂಡು ಕಾರ್ಯಾಚರಣೆ ನಡೆಸಿದ್ದಾರೆ.