ಮಳೆಯಿಂದ ಗುಡಿಸಲು ಮೇಲೆ ಮರದ ಕೊಂಬೆ ಬಿದ್ದು ಗಾಯಗೊಂಡು ಮಹಿಳೆ ಮದ್ದೂರು ಗುರುಶಾಂತಪ್ಪ ಸಾರ್ವಜನಿಕರ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು. 
ಮಂಡ್ಯ

ಮರದ ಕೊಂಬೆ ಬಿದ್ದು ಮಹಿಳೆಗೆ ಗಾಯ

ಮದ್ದೂರು: ನಗರದ ಮದ್ದೂರಮ್ಮ ದೇವಸ್ಥಾನ ಬಳಿ ಶನಿವಾರ ರಾತ್ರಿ ವಲಸೆ ಕಾರ್ಮಿಕರಿದ್ದ ಗುಡಿಸಲು ಮೇಲೆ ಮರದ ಕೊಂಬೆ ಬಿದ್ದು ಮಹಿಳೆಗೆ ಗಾಯಗೊಂಡಿದ್ದಾರೆ.
ಭಾಗ್ಯಮ್ಮ ಗಾಯಗೊಂಡ ಮಹಿಳೆ. ಬಿರುಗಾಳಿ ಮಳೆಗೆ ಮರದ ಕೊಂಬೆ ಗುಡಿಸಲಿನ ಮೇಲೆ ಬಿದಿದ್ದೆ. ಸ್ಥಳಿಯರು ತಕ್ಷಣ ಪೊಲೀಸರಿಗೆ ವಿಷಯ ತಿಳಿದ್ದು, ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ಸಹಾಯದಿಂದ ಕ್ರೇನ್‌ನ ಮೂಲಕ ಮರದ ಕೊಂಬೆಯನ್ನು ತೆರವುಗೊಳಿಸಿ ಭಾಗ್ಯಮ್ಮ ಅವರನ್ನು ರಕ್ಷಿಸಿದ್ದು, ಪ್ರಾಣಾಪಾಯ ಸಂಭವಿಸಿಲ್ಲ. ಭಾಗ್ಯಮ್ಮ ಅವರಿಗೆ ಕಾಲಿಗೆ ಗಾಯವಾಗಿದ್ದ ಪರಿಣಾಮ ನಗರ ಗುರುಶಾಂತಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಿಮ್ಸ್‌ಗೆ ದಾಖಲಿಸಲಾಗಿದೆ.