ಹಲಗೂರು ಸಮೀಪ ಕಾಡಾನೆ ಪ್ರತ್ಯಕ್ಷವಾಗಿರುವುದು. 
ಮಂಡ್ಯ

ಗುಂಡಾಪುರದ ಬಾಳೆ ತೋಟದಲ್ಲಿ ಕಾಡಾನೆ ಪ್ರತ್ಯಕ್ಷ

ಪ್ರಮುಖ ಮುಖ್ಯಾಂಶಗಳು

  • ಗುಂಡಾಪುರದ ರವಿ
  • ಬಾಳೆ ತೋಟ
ಹಲಗೂರು: ಸಮೀಪದ ಗುಂಡಾಪುರದ ರವಿ ಅವರ ಬಾಳೆ ತೋಟದಲ್ಲಿ ಭಾನುವಾರ ಬೆಳಗ್ಗೆ ಕಾಡಾನೆ ಕಾಣಿಸಿಕೊಂಡ ಪರಿಣಾಮ ಸಾರ್ವಜನಿಕರಲ್ಲಿ ಆತಂಕ ಎದುರಾಗಿತ್ತು.
ವಿಷಯ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಒಂಟಿ ಕಾಡಾನೆಯನ್ನು ಕಾಡಿಗಟ್ಟಲು ಹರಸಾಹಸ ಪಟ್ಟರು. ಇನ್ನು ಕಾಡಾನೆಯನ್ನು ಕಾಡಿಗಟ್ಟುವ ಕಾರ್ಯದಲ್ಲಿ ತೊಡಗಿದ್ದ ಅರಣ್ಯ ಇಲಾಖೆಯ ಜೀಪ್ ಚಾಲಕ ಎಸ್.ಚೇತನ್ ಅವರನ್ನು ಅನೆ ಅಟ್ಟಿಸಿಕೊಂಡು ಬಂತು. ಅದೃಷ್ಟವಾಶಾತ್ ಅಪಾಯದಿಂದ ಪಾರಾದರು. ಅನೆಯನ್ನು ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು.
ಕೆಲವು ದಿನಗಳ ಹಿಂದೆ ಮದ್ದೂರಿನಲ್ಲಿ ಕಾಣಿಸಿಕೊಂಡಿದ್ದ ಮೂರು ಕಾಡಾನೆಗಳ ಪೈಕಿ ಒಂದು ಆನೆ ಅರಣ್ಯ ಪ್ರದೇಶದಿಂದ ಈ ಕಡೆ ಬಂದಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಹಲಗೂರು ಕಡೆಗೆ ಬಂದ ಸಂದರ್ಭದಲ್ಲಿ ಎರಡು ಕಾಡಾನೆಗಳು ಬಸವನ ಬೆಟ್ಟದ ಕಾಡಿಗೆ ಹೀಗಿದ್ದು, ಗುಂಪಿನಿಂದ ಬೇರ್ಪಟ್ಟ ಒಂಟಿ ಕಾಡಾನೆ ಬಾಳೆ ತೋಟದಲ್ಲಿ ಸೇರಿಕೊಂಡು ನಂತರ ಅರಣ್ಯ ಇಲಾಖೆಯ ಕಚೇರಿಯ ಹಿಂಭಾಗ ಇರುವ ಹಳ್ಳದಲ್ಲಿ ಬೀಡು ಬಿಟ್ಟಿತ್ತು ಎನ್ನಲಾಗಿದೆ. ಆನೆಯನ್ನು ಕಾಡಿಗಟ್ಟಲು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.