ಶ್ರಾವಣ ಮಾಸದ 3ನೇ ಶನಿವಾರ ಪ್ರಯುಕ್ತ ಶ್ರೀ ಶಕ್ತಿ ಶನೈಶ್ಚರಸ್ವಾಮಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಲಾಯಿತು. 
ಮಂಡ್ಯ

ಶಕ್ತಿ ಶನೈಶ್ಚರ ದೇವಾಲಯದಲ್ಲಿ ಕಲ್ಯಾಣೋತ್ಸವ

ಶ್ರೀರಂಗಪಟ್ಟಣ:

ತಾಲೂಕಿನ ಕೂಡಲಕುಪ್ಪೆ ಗ್ರಾಮದ ಶ್ರೀ ಶಕ್ತಿ ಶನೈಶ್ಚರ ದೇವಾಲಯದಲ್ಲಿ ಶ್ರೀ ಛಾಯಾದೇವಿ ಸೂರ್ಯದೇವಾ ಕಲ್ಯಾಣೋತ್ಸವ ವಿಜೃಂಭಣೆಯಿಂದ ನೆರವೇರಿತು.

ಶ್ರಾವಣ ಮಾಸದ 3ನೇ ಶನಿವಾರ ಪ್ರಯುಕ್ತ ಗ್ರಾಮದ ದೇಗುಲದಲ್ಲಿ ಮುಂಜಾನೆಯಿಂದಲೇ ದೇವರ ಗುಡ್ಡಪ್ಪ ಗೌತಮ್ ಸ್ವಾಮಿಗೆ ಮಡಿಪೂಜೆ, ಪಂಚಾಮೃತ ಅಭಿಷೇಕ ಸೇರಿದಂತೆ ಸಾಂಪ್ರದಾಯಿಕ ಪೂಜೆಗಳನ್ನು ನೆರವೇರಿಸಿದರು. ವಿಶೇಷ ಹೂವಿನ ಅಲಂಕಾರದೊಂದಿಗೆ ಮಹಾಮಂಗಳಾರತಿ ಅರ್ಪಿಸಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಬಳಿಕ ಪ್ರಾಂಗಣದಲ್ಲಿ ಛಾಯಾದೇವಿ ಹಾಗೂ ಸೂರ್ಯದೇವ ಕಲ್ಯಾಣೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಿ ಭಕ್ತಗಣದೊಂದಿಗೆ ದೇವರ ಉತ್ಸವಮೂರ್ತಿಗಳನ್ನು ಪಲ್ಲಕ್ಕಿಯಲ್ಲಿರಿಸಿ ಮೆರವಣಿಗೆ ಮಾಡಲಾಯಿತು.
ಕಲ್ಯಾಣೋತ್ಸವದಲ್ಲಿ ಭಾಗಿಯಾದ ಭಕ್ತರು ಮತ್ತು ದೇವಾಲಯಕ್ಕೆ ಆಗಮಿಸಿದ್ದ ಜನರಿಗೆ ಅನ್ನದಾಸೋಹ ನೆರವೇರಿಸಲಾಯಿತು.