ಮದ್ದೂರು ನಗರದ ತಾಪಂನಲ್ಲಿ ತಾಲೂಕು ಆಡಳಿತ ವತಿಯಿಂದ ವಿಶ್ವಕರ್ಮ ಜಯಂತಿ ಆಚರಿಸಲಾಯಿತು. ಡಾ.ತಹಸೀಲ್ದಾರ್ ಬಿರಾದಾರ್, ಡಾ.ರವಿಶಂಕರ್, ಎಂ.ಪಿ.ಮಹೇಶ್, ಸ್ವಾಮಿ, ಕೃಷ್ಣಾಚಾರ್ ಇತರರು ಇದ್ದರು. 
ಮಂಡ್ಯ

ಸೃಷ್ಟಿಯ ವಾಸ್ತುಶಿಲ್ಪಿ ವಿಶ್ವಕರ್ಮ

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದಾರ್ ಬಣ್ಣನೆ
ಮದ್ದೂರು: ದೇವಶಿಲ್ಪಿ ಹಾಗೂ ಸೃಷ್ಟಿಯ ವಾಸ್ತುಶಿಲ್ಪಿ ಎನಿಸಿಕೊಂಡಿರುವ ಭಗವಾನ್ ಶ್ರೀ ವಿಶ್ವಕರ್ಮರ ಜನ್ಮದಿನವನ್ನು ವಿಶ್ವಕರ್ಮ ಜಯಂತಿ ಅಥವಾ ವಿಶ್ವಕರ್ಮ ಪೂಜೆ ಎಂದು ಆಚರಿಸಲಾಗುತ್ತದೆ ಎಂದು ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದಾರ್ ತಿಳಿಸಿದರು.
ನಗರದ ತಾಪಂನಲ್ಲಿ ತಾಲೂಕು ಆಡಳಿತ ವತಿಯಿಂದ ಗುರುವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಶ್ವಕರ್ಮ ಜನಾಂಗದವರು ದೇಗುಲ, ಮನೆಗಳ ನಿರ್ಮಾಣ, ಆಭರಣ ತಯಾರು ಮಡುವ ಜತೆಗೆ ಕೃಷಿಗೆ ಅಗತ್ಯ ಸಲಕರಣೆಗಳನ್ನು ಸಿದ್ಧಪಡಿಸುವ ಮೂಲಕ ರೈತರಿಗೂ ಸಹಕಾರಿಯಾಗಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಎಂ.ಪಿ.ಮಹೇಶ್ ಮಾತನಾಡಿ, ಹಿಂದೂ ಧರ್ಮದ ನಂಬಿಕೆಯಂತೆ ಭಗವಾನ್ ವಿಶ್ವಕರ್ಮರು ದೇವತೆಗಳಿಗೆ ಅರಮನೆಗಳು, ಆಯುಧಗಳು ಮತ್ತು ಹಲವು ಅದ್ಭುತ ರಚನೆಗಳನ್ನು ನಿರ್ಮಿಸಿದವರು. ಇವರು ಸ್ವರ್ಗಲೋಕ, ಲಂಕಾಪುರಿ, ದ್ವಾರಕಾ ನಗರ ಮತ್ತು ಇಂದ್ರಪ್ರಸ್ಥವನ್ನು ನಿರ್ಮಿಸಿದ್ದಾರೆ ಎಂಬ ನಂಬಿಕೆ ಇದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪುಟ್ಟಾಚಾರಿ, ಪುಟ್ಟಚೌಡಾಚಾರಿ, ಮಂಟೇಸ್ವಾಮಿ, ರಾಜಪ್ಪಾಜಿ, ನಾಗೇಂದ್ರಾಚಾರಿ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಟಿಎಚ್‌ಒ ಡಾ.ರವಿಶಂಕರ್, ವಿಶ್ವಕರ್ಮ ಜನಾಂಗದ ತಾಲೂಕು ಅಧ್ಯಕ್ಷ ಎಂ.ಪಿ.ಮಹೇಶ್, ಉಪಾಧ್ಯಕ್ಷ ಕೆ.ಬೆಳ್ಳೂರು ಸ್ವಾಮಿ, ಮಾಜಿ ಅಧ್ಯಕ್ಷ ಎಂ.ಸಿ.ಕೃಷ್ಣಾಚಾರ್, ಮಹಿಳಾ ಅಧ್ಯಕ್ಷೆ ಪಿ.ಸುವರ್ಣಾ ಪ್ರಸಾದ್, ಗೌರವಾಧ್ಯಕ್ಷರಾದ ರಾಜಮ್ಮ, ಲಕ್ಷ್ಮಣಾಚಾರ್, ಪಾಪ ಆಚಾರ್, ಪಿ.ಸಿದ್ದಪ್ಪಾಜಿ, ಪ್ರಧಾನ ಕಾರ್ಯದರ್ಶಿ ಕೆ.ಎಸ್.ಹರೀಶ್ ಹಾಗೂ ರವಿ, ಪ್ರಸಾದ್, ಎಚ್.ಪಿ.ಈಶ್ವರ ಆಚಾರ್, ತೈಲೂರ್ ರಾಮಾಚಾರ್, ಸದಾನಂದ ಇತರರು ಇದ್ದರು.