ಶ್ರವಣಬೆಳಗೊಳ-ಮೇಲುಕೋಟೆ ರಾಜ್ಯಹೆದ್ದಾರಿಯಿಂದ -ಸಿಂಗಾಪುರ ಗುಜಗೋನಹಳ್ಳಿ-ತಾಳೆಕೆರೆ ಸಂಪರ್ಕಿಸುವ ರಸ್ತೆಯ ಸ್ಥಿತಿ. 
ಮಂಡ್ಯ

ರಸ್ತೆ ಅಭಿವೃದ್ಧಿಗೆ ಗ್ರಾಮಸ್ಥರ ಒತ್ತಾಯ

ಪ್ರಜ್ವಲ್.ಎನ್

ಮೇಲುಕೋಟೆ: ಶ್ರವಣಬೆಳಗೊಳ-ಮೇಲುಕೋಟೆ ರಾಜ್ಯಹೆದ್ದಾರಿಯಿಂದ ಜಿ. ಸಿಂಗಾಪುರ -ಗುಜಗೋನಹಳ್ಳಿ -ತಾಳೆಕೆರೆ ಸಂಪರ್ಕಿಸುವ 5-6 ಕಿಮೀ ಗ್ರಾಮೀಣ ರಸ್ತೆಯನ್ನು ನವೀಕರಿಸಲು ತಕ್ಷಣ ಕ್ರಮವಹಿಸಬೇಕು ಎಂದು ಗುಜಗೋನಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸಿಂಗಾಪುರದಿಂದ-ಗುಜಗೋನಹಳ್ಳಿವರೆಗಿನ ರಸ್ತೆ ಸಂಪೂರ್ಣ ಹಾಳಾಗಿದ್ದು ಮಳೆಬಂದ ಸಂದರ್ಭದಲ್ಲಿ ರಸ್ತೆ ಸಂಪೂರ್ಣ ಕೆರೆಯಂತೆ ನಿರ್ಮಾಣವಾಗುತ್ತದೆ. ಇದರಿಂದ ಗ್ರಾಮಸ್ಥರು, ವಾಹನ ಸವಾರರು ಓಡಾಡಲು ತೊಂದರೆ ಅನುಭವಿಸುತ್ತಿದ್ದು, ಅಪಘಾತಗಳು ಸಹ ಸಂಭವಿಸಿವೆ. ಇಷ್ಟಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ರಸ್ತೆ ಅಭಿವೃದ್ಧಿಗೆ ಗಮನಹರಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.