ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಶಾಸಕರ ಅನುದಾನದಲ್ಲಿ ಅಂಗವಿಕಲ ಹೊಯ್ಸಳ ಅವರಿಗೆ ವಾಹನ ವಿತರಿಸಿದರು. ಸಿ.ಚಲುವರಾಜು, ಬಸವರಾಜು, ಎಂ.ಎಲ್.ಸಂತೋಷ್, ರಜಿತ್ ಇದ್ದರು. MDR
ಮಂಡ್ಯ

ಶಾಸಕರ ಅನುದಾನದಲ್ಲಿ ಅಂಗವಿಕಲನಿಗೆ ವಾಹನ

ದೈನಂದಿನ ಜೀವನದ ಅನುಕೂಲಕ್ಕಾಗಿ

ಮದ್ದೂರು: ನಗರದ ಸೋಮೇಗೌಡರ ಬೀದಿಯ ನಿವಾಸಿ ಅಂಗವಿಕಲ ಹೊಯ್ಸಳ ಎಂಬುವವರು ದೈನಂದಿನ ಜೀವನದ ಅನುಕೂಲಕ್ಕಾಗಿ ವಾಹನ ಕೊಡಿಸುವಂತೆ ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರಾದ ಉಪಾಧ್ಯಕ್ಷ ದಿನೇಶ್‌ಗೂಳಿಗೌಡಗೆ ಮನವಿ ಮಾಡಿದ್ದ ಬೆನ್ನಲ್ಲೆ ಗೂಳಿಗೌಡ ಅವರು ಶಾಸಕರ ಅನುದಾನದಲ್ಲಿ ಶುಕ್ರವಾರ ನಗರದಪ್ರವಾಸಿ ಮಂದಿರದಲ್ಲಿ ವಾಹನ ವಿತರಿಸಿದರು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಚಲುವರಾಜ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಬಸವರಾಜು, ತಾಪಂ ಇಒ ರಾಮಲಿಂಗಯ್ಯ, ನಗರಸಭೆ ಮಾಜಿ ಸದಸ್ಯ ಎಂ.ಬಿ.ಸಚಿನ್, ಕಾಂಗ್ರೆಸ್ ಮುಖಂಡರಾದ ಯಶವಂತ , ಅಲಿ ಖಾನ್ , ರಜಿತ್ ಹಾಗೂ ಗ್ಯಾರಂಟಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.