ಪತ್ರಿಕಾ ದಿನಾಚರಣೆ ಅಂಗವಾಗಿ ಮದ್ದೂರು ನಗರದ ಎಚ್.ಕೆ.ವೀರಣ್ಣಗೌಡ ಕಾಲೇಜು ಆವರಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಕರ್ತರು ಹಾಗೂ ಅವರ ಕುಟುಂಬ ಸದಸ್ಯರಿಗಾಗಿ ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಭಾನುವಾರ ಆಯೋಜಿಸಲಾಗಿತ್ತು.
ಮದ್ದೂರು: ಪತ್ರಿಕಾ ದಿನಾಚರಣೆ ಅಂಗವಾಗಿ ಮದ್ದೂರು ನಗರದ ಎಚ್.ಕೆ.ವೀರಣ್ಣಗೌಡ ಕಾಲೇಜು ಆವರಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಕರ್ತರು ಹಾಗೂ ಅವರ ಕುಟುಂಬ ಸದಸ್ಯರಿಗಾಗಿ ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಭಾನುವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸುನಿಲ್ ಕುಮಾರ್, ಆರೋಗ್ಯ ದೃಷ್ಟಿಯಿಂದ ಎಲ್ಲರೂ ಯಾವುದಾದರೂ ಒಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಕ್ರೀಡೆಯಿಂದ ದೇಹ ಸದೃಢವಾಗುವುದರ ಜತೆಗೆ ಮನಸ್ಸು ಉಲ್ಲಾಸದಿಂದಿರುತ್ತದೆ ಎಂದು ಹೇಳಿದರು.
ಕ್ರೀಡಾಕೂಟದಲ್ಲಿ ಕುಟುಂಬಸ್ಥರು ಮತ್ತು ಮಕ್ಕಳು ಉತ್ಸುಕತೆಯಿಂದ ಪಾಲ್ಗೊಂಡು ಹಲವಾರು ಕ್ರೀಡೆಗಳಲ್ಲಿ ಭಾಗವಹಿಸಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವನಂಜಯ್ಯ, ಜಿಲ್ಲಾ ಸಂಘದ ನಿರ್ದೇಶಕ ಎಸ್.ಪುಟ್ಟಸ್ವಾಮಿ, ತಾಲೂಕು ಪ್ರಧಾನ ಕಾರ್ಯದರ್ಶಿ ಎಂ.ಆರ್.ಚಕ್ರಪಾಣಿ, ಉಪಾಧ್ಯಕ್ಷ ಸಿ.ಹರೀಶ್ ಖಜಾಂಚಿ ಪಿ.ನಂದೀಶ್, ಕಾರ್ಯದರ್ಶಿ ಎಂ.ಪಿ.ವೆಂಕಟೇಶ್, ಮಾಜಿ ಅಧ್ಯಕ್ಷ ಅಣ್ಣೂರು ಸತೀಶ, ಪದಾಧಿಕಾರಿಗಳಾದ ಎಚ್.ಜಿ.ರವಿಕುಮಾರ್, ವಿ.ಎಸ್.ಪ್ರಭು, ಎಸ್.ಕೆ.ಸುಂದರರಾಜ್, ಕೃಷ್ಣ, ಸುನೀಲ್‌ಕುಮಾರ್, ಎಂ.ಆರ್.ಅಶೋಕ್ ಕುಮಾರ್, ನಾಗರಾಜು, , ಅಂಬರಹಳ್ಳಿ ಸ್ವಾಮಿ, ಚಾಮನಹಳ್ಳಿ ಮಂಜು, ಯು.ಎಸ್.ಶಿವಕುಮಾರ್, ನಾಗಮ್ಮ, ಆನಂದ, ಮಹಾದೇವ, ಮಧುಕುಮಾರ್ ಇದ್ದರು.