ಮದ್ದೂರಮ್ಮ ದನಗಳ ಜಾತ್ರೆಯಲ್ಲಿ ಮೊದಲ ಚಾಂಪಿಯನ್ ಪಡೆದ ರಾಸುಗಳಿಗೆ ಶಾಸಕರಾದ ಕೆ.ಎಂ.ಉದಯ್, ದರ್ಶನ್‌ಪುಟ್ಟಣಯ್ಯ, ದಿನೇಶ್‌ಗೂಳಿಗೌಡ ಬಹುಮಾನ ನೀಡಿದರು. ಕೋಕಿಲಾ ಅರುಣ್, ಟಿ.ಆರ್.ಪ್ರಸನ್ನಕುಮಾರ್, ಚಲುವರಾಜು, ರಾಜೀವ್, ಕದಲೂರು ರಾಮಕೃಷ್ಣ ಇದ್ದರು.
ಮದ್ದೂರು: ಮುಂದಿನ ವರ್ಷದಿಂದ ಮದ್ದೂರು ಉತ್ಸವವನ್ನು ಇನ್ನಷ್ಟು ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಮದ್ದೂರು ಉತ್ಸವದ ಅಂಗವಾಗಿ ಗುರುವಾರ ಸಂಜೆ ರಾಸುಗಳಿಗೆ ಬಹುಮಾನ ನೀಡುವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರಪ್ರಥಮ ಬಾರಿಗೆ ಮದ್ದೂರಮ್ಮನ ಹಬ್ಬ ಹಾಗೂ
ನರಸಿಂಹಸ್ವಾಮಿ ಬ್ರಹ್ಮೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಮದ್ದೂರು ಉತ್ಸವಕ್ಕೆ ದೊರೆತ ಉತ್ತಮ ಪ್ರತಿಕ್ರಿಯೆಗೆ ಗೌರವಿಸಿ ಮುಂದಿನ ವರ್ಷ ಟ್ರಸ್ಟ್ ವತಿಯಿಂದ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದರು.
ರೈತರು ತಮ್ಮ ರಾಸುಗಳಿಗೆ ಪೋಷಣೆ ಮಾಡುವುದು ಅಷ್ಟು ಸುಲಭದ ಮಾತಲ್ಲ. ಮನೆ ಮಕ್ಕಳಂತೆ ರಾಸುಗಳನ್ನು ಪೋಷಣೆ ಮಾಡುತ್ತಾರೆ. ಹೀಗಾಗಿ ಅವರಿಗೆ ಗೌರವ ಸಮರ್ಪಣೆ ಮಾಡಬೇಕು ಹಾಗೂ ಜಾತ್ರೆಗೆ ಹೆಚ್ಚಿನ ಪ್ರಮಾಣದಲ್ಲಿ ರಾಸುಗಳು ಬರಬೇಕು ಎಂಬ ಉದ್ದೇಶದಿಂದ ಬಹುಮಾನ ನೀಡಲಾಗುತ್ತಿದೆ ಎಂದರು.
ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಮದ್ದೂರಿನ ಇತಿಹಾಸದಲ್ಲೆ ಇದೇ ಮೊದಲ ಬಾರಿಗೆ ಮದ್ದೂರು ಉತ್ಸವ ಮಾಡುವ ಮೂಲಕ ರಾಸುಗಳನ್ನು ಪ್ರೋತ್ಸಾಹಿಸಿ, ರೈತರ ಬೆನ್ನಿಗೆ ನಿಂತಿರುವುದು ಪ್ರಶಂಸನೀಯ ಸಂಗತಿ ಎಂದರು.
ರಾಸುಗಳು ದಿನ ದಿನಕ್ಕೆ ಕ್ಷೀಣಿಸುತ್ತಿವೆ. ರೈತರು ರಸಗೊಬ್ಬರವನ್ನು ಉಪಯೋಗ ಮಾಡದೇ ಕೊಟ್ಟಿಗೆ ಗೊಬ್ಬರದಿಂದ ಬೇಸಾಯ ಮಾಡಿ ಭೂಮಿಯ ಫಲವತ್ತತೆಯನ್ನು ಕಾಪಾಡಬೇಕು. ಇದರ ಜೊತೆಗೆ ಗಿಡ ಮರಗಳನ್ನು ಬೆಳೆಸುವ ಮೂಲಕ ಇಂದಿನ ಹವಾಮಾನ ವೈಪರಿತ್ಯಗಳಿಂದ ಪಾರಾಗಬಹುದು ಎಂದು ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ಶಾಸಕ ಕೆ.ಎಂ.ಉದಯ್ ಅವರು ತಮ್ಮದೆಯಾದ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಮೊದಲ ಬಾರಿಗೆ ಮದ್ದೂರು ಉತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಿರುವುದು ಹಬ್ಬದ ಖುಷಿ ಇಮ್ಮಡಿಗೊಳ್ಳಲು ಕಾರಣವಾಗಿದೆ ಎಂದರು.
ಶಾಸಕ ದರ್ಶನ್ ಅವರು ತಂದೆ ಪುಟ್ಟಣ್ಣಯ್ಯ ಹೆಸರಿನಲ್ಲಿ ಮಾರಸಿಂಗಹಳ್ಳಿ ಗ್ರಾಮದ ಕಿರಣ್‌ಗೂಳಿ ಎಂಬ ರೈತರ ಉತ್ತಮ ಜೋಡಿ ಹಸುವಿಗೆ 25 ಸಾವಿರ ರೂ. ನಗದು ಬಹುಮಾನ ನೀಡಿ ಗೌರವಿಸಿದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರವಾಸಿ ಮಂದಿರದಿಂದ ಉಗ್ರ ನರಸಿಂಹ ಸ್ವಾಮಿ ದೇವಾಲಯದವರೆಗೆ ನಗರದ ಪ್ರಮುಖ ಬೀದಿಗಳಲ್ಲಿ ಬಹುಮಾನ ಪಡೆದ ರಾಸುಗಳು ಬೃಹತ್ ಮೆರವಣಿಗೆ ನಡೆಸಿದ್ದು ಸಾರ್ವಜನಿಕರ ಗಮನ ಸೆಳೆಯಿತು. ಶಾಸಕ ಕೆ.ಎಂ.ಉದಯ್ ರಾಸುಗಳಿಗೆ ಪೂಜೆ ಸಲ್ಲಿಸಿ ಮೆರವಣಿಗೆ ಚಾಲನೆ ನೀಡಿದರು.
ಮನ್ ಮುಲ್ ನಿರ್ದೇಶಕ ಹರೀಶ್ ಬಾಬು, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಚಲುವರಾಜು, ನಿರ್ದೇಶಕ ಪಿ.ಸಂದರ್ಶ, ನಗರಸಭಾ ಮಾಜಿ ಅಧ್ಯಕ್ಷೆ ಕೋಕಿಲಾ ಅರುಣ್, ಮಾಜಿ ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್, ಮಾಜಿ ಸದಸ್ಯರಾದ ಸರ್ವಮಂಗಳ, ಎಂ.ಬಿ.ಸಚ್ಚಿನ್, ಸಿದ್ದರಾಜು, ವನಿತಾ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಬಸವರಾಜು, ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಮನ್ ಮುಲ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಶಿವಲಿಂಗಯ್ಯ, ತಾಪಂ ಇಓ ರಾಮಲಿಂಗಯ್ಯ, ಸಹಾಯಕ ನಿರ್ದೇಶಕ ಗೋವಿಂದ್, ಕಾಂಗ್ರೆಸ್ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಮಮತಾ, ಮುಖಂಡರಾದ ಎಂ.ಡಿ.ಮಹಾಲಿಂಗಯ್ಯ, ಕೆ.ಎಂ.ರವಿ, ಅಜ್ಜಹಳ್ಳಿ ರಾಮಕೃಷ್ಣ ಮತ್ತಿತರರು ಇದ್ದರು.
ಚಾಂಪಿನ್ ರಾಸುಗಳು: ಸುರೇಶ್ ನೀಲಕಂಠನಹಳ್ಳಿ ಮದ್ದೂರು ತಾಲೂಕು (ಪ್ರಥಮ ಚಾಂಪಿಯನ್),
ಶ್ರೀನಿವಾಸ್ ತೊರೆಶೆಟ್ಟಿಹಳ್ಳಿ ಮದ್ದೂರು ತಾಲೂಕು (ದ್ವಿತೀಯ ಚಾಂಪಿಯನ್), ಬಿ.ಟಿ.ಸುನಿಲ್‌ಕುಮಾರ್ ಬಿದರಕೋಟೆ ಮದ್ದೂರು ತಾಲೂಕು ತೃತೀಯ ಚಾಂಪಿಯನ್.
ಎರಡು ಹಲ್ಲಿನ ಜೋಡಿ ಎತ್ತುಗಳು ಬೈರೇಗೌಡ ಮಾಯಪ್ಪನಹಳ್ಳಿ ಮಂಡ್ಯ (ಪ್ರ), ಅಂಜದ್‌ಪಾಷ ದುಬ್ಬಗಟ್ಟಿ ಮಾಗಡಿ (ದ್ವಿ), ಚಂದ್ರ ನಾಗಮಂಗಲ (ತೃ).
ಬಾಯಿ ಗೂಡಿನ ಜೋಡಿ ಎತ್ತುಗಳು: ಸಂದೀಪ್‌ಗೌಡ ತಿಂಡ್ಳ ಆನೇಕಲ್ (ಪ್ರ), ಮಂಜುನಾಥ್ ಕೆ.ದೊಮ್ಮಸಂದ್ರ ಬೆಂಗಳೂರು (ದ್ವಿ), ಕಿರಣ್ ಮಾರಸಿಂಗನಹಳ್ಳಿ (ತೃ).
ಆರು ಹಲ್ಲಿನ ಜೋಡಿ ಎತ್ತುಗಳು: ಆದರ್ಶ ತಗ್ಗಹಳ್ಳಿ (ಪ್ರ), ಎಂ.ಎಸ್.ಕಿರಣ್ ಮಂಡ್ಯ ಗಾಂಧಿನಗರ (ದ್ವಿ), ಎಚ್.ಎನ್. ಉಮೇಶ್ ಹೊಳಲು ಮಂಡ್ಯ (ತೃ).
ನಾಲ್ಕು ಹಲ್ಲಿನ ಜೋಡಿ ಎತ್ತುಗಳು: ಸಂದೀಪ್ ಇರಿಸೇವೆ ಚನ್ನರಾಯಪಟ್ಟಣದ (ಪ್ರ), ಸುನಿಲ್ ಸಾತನೂತು ಮಂಡ್ಯ (ದ್ವಿ), ಜಿತೇಂದ್ರ ಹೆಬ್ಬೂರು ತುಮಕೂರು ಜಿಲ್ಲೆ (ತೃ).
ಬಾಯಿ ಗೂಡಿನ ಜೋಡಿ ಹಸುಗಳು: ಅರಸೇಗೌಡ ಬನ್ನೂರು ಮೈಸೂರು, ಚನ್ನೇಗೌಡ ಮದ್ದೂರು (ದ್ವಿ), ಪ್ರೀತುಕುಮಾರ್ ಕಿರಗಂದೂರು ಮಂಡ್ಯ (ತೃ).
ಹಾಲು ಹಲ್ಲಿನ ಜೋಡಿ ಎತ್ತುಗಳು: ಸಿದ್ದೇಗೌಡ ಯಲಾದಹಳ್ಳಿ ಮದ್ದೂರು (ಪ್ರ), ಮನು ಕಲ್ಲಹಳ್ಳಿ ಮಂಡ್ಯ (ದ್ವಿ), ನಿರಂಜನ್ ಗೋಪಾಲಪುರ ಮಂಡ್ಯ (ತೃ).
ಬೀಜದ ಹೋರಿ: ರೇವಣ್ಣ ಅಂಜನಾಪುರ ರಾಮನಗರ ತಾಲೂಕು (ಪ್ರ), ಸಿ.ಡಿ.ಅರಕೇಶ್ ಚನ್ನಪ್ಪನದೊಡ್ಡಿ ಮಂಡ್ಯ (ದ್ವಿ) ಎನ್.ಎಲ್. ಬಲರಾಜು ನಗರಕೆರೆ ಮದ್ದೂರು (ತೃ).
ಟಗರು: ಪ್ರವೀಣ್‌ಕುಮಾರ್ ನಗರಕೆರೆ (ಪ್ರ), ಸೋಮೇಶ್ ನೀಲಕಂಠನಹಳ್ಳಿ (ದ್ವಿ), ನಿರಂಜನ್ ಚಾಮನಹಳ್ಳಿ (ತೃ).
ಮೊದಲ ಚಾಂಪಿಯನ್‌ಗೆ 2 ಲಕ್ಷ ರೂ.ನಗದು ಟ್ರೋಫಿ, ಎರಡೇ ಚಾಂಪಿಯನ್‌ಗೆ 1 ಲಕ್ಷ ರೂ. ನಗದು ಟ್ರೋಫಿ, ಮೂರನೇ ಚಾಂಪಿಯನ್‌ಗೆ 50 ಸಾವಿರ ನಗದು ಮತ್ತು ಟ್ರೋಫಿ, ಉಳಿದ ಎಲ್ಲಾ ರೀತಿ ಎತ್ತುಗಳು, ಜೋಡಿ ಹಸುಗಳು ಹಾಗೂ ಟಗರು ಸೇರಿ 36 ಬಹುಮಾನ (ತಲಾ 10 ಸಾವಿರ ರೂ.) ವನ್ನು ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ವಿತರಣೆ ಮಾಡಲಾಯಿತು.