ರಾಯಚೂರಿನಲ್ಲಿ ಡಿ.20 ಮತ್ತು 21 ರಂದು ನಡೆಯುವ 11ನೇ ಅಖಿಲ ಭಾರತ ರಾಜ್ಯ ದಲಿತ ಸಾಹಿತ್ಯ ಪರಿಷತ್ ಸಮ್ಮೇಳನಕ್ಕೆ ದಲಿತ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಲು ಮದ್ದೂರು ನಗರದ ಶಿವಪುರದ ರೈಲ್ವೆ ನಿಲ್ದಾಣದಿಂದ ಪ್ರಯಾಣ ಬೆಳೆಸಿದರು. ಹುರುಗಲವಾಡಿ ರಾಮಯ್ಯ, ಕೆ.ಟಿ.ಶಿವಕುಮಾರ್, ಚಂದ್ರಶೇಖರನ್, ದೇವರಾಜ್‌ಕೊಪ್ಪ, ಗುರುಮೂರ್ತಿ ಇದ್ದರು.
ಮದ್ದೂರು: ರಾಯಚೂರಿನಲ್ಲಿ ಡಿಸೆಂಬರ್ 20 ಮತ್ತು 21ರಂದು ನಡೆಯುವ 11ನೇ ಅಖಿಲ ಭಾರತ ರಾಜ್ಯ ದಲಿತ ಸಾಹಿತ್ಯ ಪರಿಷತ್ ಸಮ್ಮೇಳನಕ್ಕೆ ತಾಲೂಕು ಹಾಗೂ ಜಿಲ್ಲೆಯಿಂದ ಜಿಲ್ಲಾಧ್ಯಕ್ಷ ಹುರಗಲವಾಡಿ ರಾಮಯ್ಯ ಅವರ ನೇತೃತ್ವದಲ್ಲಿ ಸುಮಾರು 100ಕ್ಕೂ ಹೆಚ್ಚು ದಲಿತ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಲು ಮದ್ದೂರು ನಗರದ ಶಿವಪುರದ ರೈಲ್ವೆ ನಿಲ್ದಾಣದಿಂದ ಶುಕ್ರವಾರ ಪ್ರಯಾಣ ಬೆಳೆಸಿದರು.
ಜಿಲ್ಲಾ ಹುರಗಲವಾಡಿ ರಾಮಯ್ಯ ಮಾತನಾಡಿ, ಸಮ್ಮೇಳನಾಧ್ಯಕ್ಷತೆಯನ್ನು ಸಾಹಿತಿ ಡಾ.ಜಯದೇವಿ ಗಾಯಕವಾಡ ವಹಿಸಲಿದ್ದಾರೆ. ಸಮ್ಮೇಳನದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಬಂಧಿಸಿದಂತೆ ಗೋಷ್ಠಿಗಳು ನಡೆಯಲಿವೆ. ನಮ್ಮ ತಾಲೂಕಿನವರಾದ ದಲಿತ ಸಾಹಿತ್ಯ ಪರಿಷತ್ ಉಪಾಧ್ಯಕ್ಷೆ ಸರೋಜಮ್ಮ ಲಿಂಗರಾಜು ಕವಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮ್ಮೇಳನಕ್ಕೆ ಹೋಗುತ್ತಿದ್ದೇವೆ ಎಂದು ತಿಳಿಸಿದರು.
ದಲಿತ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೆ.ಟಿ.ಶಿವಕುಮಾರ್, ಜಿಲ್ಲಾ ಗೌರವಾಧ್ಯಕ್ಷ ಪ್ರೊ. ಚಂದ್ರಶೇಖರನ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ದೇವರಾಜ್ ಕೊಪ್ಪ, ನಿವೃತ್ತ ಉಪನ್ಯಾಸಕ ಗುರುಮೂರ್ತಿ, ಪದಾಧಿಕಾರಿಗಳಾದ ಮುಕುಂದ, ಜಯರಾಂ, ಕೆ.ಜೆ.ಗೋವಿಂದ ರಾಜ್, ಸರೋಜಮ್ಮ ಲಿಂಗರಾಜು, ಮಂಜುಳಾ, ಶಿವಮ್ಮ, ನಾಗೇಶ್, ವೆಂಕಟೇಶ್ ಇದ್ದರು.