ಪಾಂಡವಪುರ ತಾಲೂಕಿನ ವಿವಿಧ ಗ್ರಾಮಗಳಿಂದ ಹುಣಸೂರಿನ ಕಡೆಗೆ ಕೆ.ಆರ್.ಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಂಬರ್ ಪ್ಲೇಟ್ ಇಲ್ಲದ ಟ್ರಾೃಕ್ಟರ್‌ಗಳಲ್ಲಿ ಮಿತಿಮೀರಿ ಕಬ್ಬಿನ ಗರಿ ಸಾಗಣೆ ಮಾಡುತ್ತಿರುವುದು. 
ಮಂಡ್ಯ

ಟ್ರಾಕ್ಟರ್‌ಗಳಲ್ಲಿ ಮಿತಿಮೀರಿ ಕಬ್ಬಿನ ಗರಿ ಸಾಗಣೆ

ಎಂ.ರವಿ

ಸಾರ್ವಜನಿಕರಿಗೆ ಕಿರಿಕಿರಿ- ನಂಬರ್ ಪ್ಲೇಟ್‌ಗಳೇ ಇಲ್ಲ

ಕೆ.ಆರ್.ಸಾಗರ: ಪಾಂಡವಪುರ ತಾಲೂಕಿನ ವಿವಿಧ ಗ್ರಾಮಗಳಿಂದ ಹುಣಸೂರಿನ ಕಡೆಗೆ ಕೆ.ಆರ್.ಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಂಬರ್ ಪ್ಲೇಟ್ ಇಲ್ಲದ ಟ್ರಾಕ್ಟರ್‌ಗಳಲ್ಲಿ ಮಿತಿಮೀರಿ ಕಬ್ಬಿನ ಗರಿ ಸಾಗಣೆ ಮಾಡುತ್ತಿರುವ ಕಾರಣ ರಸ್ತೆಯಲ್ಲಿ ಸಂಚಿರಿಸುವ ಬೈಕ್ ಸವಾರರು, ಹಾಗೂ ಇತರ ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ.
ಕಳೆದ ಹಲವು ದಿನಗಳಿಂದ ನಂಬರ್ ಪ್ಲೇಟ್ ಇಲ್ಲದ ಟ್ರಾಕ್ಟರ್‌ಗಳನ್ನು ಮೊಬೈಲ್‌ನಲ್ಲಿ ಮಾತನಾಡುತ್ತ ಹಾಗೂ ಸ್ಪಿಕರ್ ಹಾಕಿಗೊಂಡು ಒವರ್‌ಲೋಡ್ ಮಾಡಿಕೊಂಡು ಕಬ್ಬಿನ ಗರಿ ಸಾಗಣೆ ಮಾಡುತ್ತಿದ್ದು, ಹಿಂಬದಿಯಲ್ಲಿ ಬರುವ ವಾಹನ ಚಾಲಕರಿಗೆ ತೊಂದರೆಯಾಗುತ್ತಿದೆ. ಇದರ ಬಗ್ಗೆ ಪೊಲೀಸರು ಗಮನ ಹರಿಸುತ್ತಿಲ್ಲ ಏಕೆ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಹೆಲ್ಮೆಟ್ ಇಲ್ಲದೆ ಸವಾರರಿಗೆ ದಂಡ ವಿಧಿಸುವ ಇಲಾಖೆ ರಸ್ತೆಯಲ್ಲಿ ಕಾನೂನು ಉಲ್ಲಂಘನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಇವರ ವಿರುದ್ಧ ಏಕೆ ಕ್ರಮ ತೆಗೆದುಕೊಂಡಿಲ್ಲ? ಎಂಬುದು ಸಾರ್ವಜನಿಕರ ವಲಯದಲ್ಲಿ ಗುಸುಗುಸು ಮಾತಾಗಿದೆ.
ರಾತ್ರಿ-ಹಗಲು ಎನ್ನದೆ ರಸ್ತೆ ತುಂಬ ಕಬ್ಬಿನ ಗರಿ ಹರಡಿಕೊಂಡು ಟ್ರಾೃಕ್ಟರ್ ಹಾಗೂ ಲಾರಿಗಳ ದಾಖಲಾತಿ ಪರಿಶೀಲನೆ ಮಾಡಲಿ. ಉಲ್ಲಂಘನೆ ಮಾಡಿದ್ದರೆ ಕ್ರಮ ಜರುಗಿಸಲಿ ಎಂಬುದು ಸಾರ್ವಜನಿಕ ವಲಯದ ಮಾತಾಗಿದೆ.